ದುಗುಡಗಳು ತುಂಬಿವೆ ಮನದಲ್ಲಿ ನೂರಾ
ಯೋಚಿಸಿ ಯೋಚಿಸಿ ಆಗುತಿದೆ ನನ್ನ ತಲೆ
ಕೊನೆ ಎಂದಿಗೋ ತಿಳಿಯದಾಗಿದೆ ನನ್ನೀ
ಹೇಗೇಗೋ ಆಗುತಿದೆ ನನಗೇತಕೆ....
ತಡೆಯಬಹುದು ಕಷ್ಟಗಳ ಒಂದು ಎರಡು
ತಡೆಯಲಾಗದು ಕಷ್ಟಗಳು ಬಂದರೆ ಒಂದರ ಮೇಲೊಂದು..
ಪರರಿಗೆ ಸಾಂತ್ವನ ಹೇಳುವ ನನ್ನ ಮನಸು
ಹಿಡಿತಕ್ಕೆ ಸಿಗದೇ ಹೋಗಿದೆ ಇಂದು ನನ್ನೀ ಮನಸು....
ನನ್ನ ಕಷ್ಟಗಳಿಗೆ ಯಾರನ್ನು ಹಳಿಯಲಿ
ಗೊಂದಲಗಳು ತಾಂಡವವಾಡುತ್ತಿದೆ ಮನದಲ್ಲಿ..
ಕನಸುಗಳು ಈಡೇರುವ ಆಸೆಗಳು ಸತ್ತುಹೋಗಿದೆ
ಏನು ಮಾಡಲು ತೋಚುತ್ತಿಲ್ಲ, ದಾರಿ ಕಾಣದಾಗಿದೆ
ಪ್ರತಿಕ್ರಿಯೆ (11)