ಮೊದಲ ಮಳೆ ಹನಿ ಬೀಳೆ
ಮನದ ಆಳದ ನೆನಪು ಮರುಕಳಿಸೆ
ಮಧುರ ಮಧುರ ಅತಿ ಮಧುರಾSSS
ಅನುರಾಗವರಳಿಸಿದ
ಬಾಳ ಬಾಂಧವ್ಯವ ಬೆಸೆದ
ಆ ಮಳೆಯ ಹನಿಯ ನೆನಪು
ಮಧುರ ಮಧುರ ಅತಿ ಮಧುರಾSSS
ಬಾಳಿಗೆ ನವ ಚೈತನ್ಯವ ನೀಡಿ
ಬದುಕಿಗೆ ಆಸರೆಯ ನೀಡಿ
ಕಾರ್ಮೋಡವ ಕರಗಿಸಿ ಆಸೆಯ ಚಿಗುರಿಸಿ
ತಂಪನೆರೆದ ಆ ಮಳೆಯ ಹನಿಯ ನೆನಪು
ಮಧುರ ಮಧುರ ಅತಿ ಮಧುರಾSSS
ಹರ್ಷದಾ ಹೊನಲು ಹರಿವುದು
ಪುಳಕಗೊಳ್ವುದು ಮನವು
ಹುಚ್ಚೆದ್ದು ಕುಣಿವುದು ತನುವು
ಆ ಮಳೆಯ ಹನಿಯ ನೆನಪು
ಮಧುರ ಮಧುರ ಅತಿ ಮಧುರಾSSS
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)