...

ಗತ ಭೂತದಲ್ಲಿ ನೊಂದು ಬೆಂದ ನಿರ್ಲಿಪ್ತ ಆತ್ಮದ ಜ್ವಾಲೆ ಪುಟಿದೇಳು

ರೆಟ್ಟೆ, ಜೇಬು ಬಲಿತವರ ಬರ್ಬರ ಹಿಂಸೆಗೆ ಏಕೀಕೃತ ಹೋರಾಟ ವಜ್ರಾಯುಧ

ಸಂಸ್ಕೃತಿ ಸೋಗಿನ ಮುಗ್ಧ

ಸಾಮಾಜಿಕ ಸಂರಚನೆಯ ಅನಾಥ

ಪ್ರತಿರೋಧವೊಡ್ಡದ ನಿರುಪದ್ರವಿ

ಪರಂಪರಾನುಗತ ನೋವುಂಡ ಹಿರಿಯ

ಕಾಲ, ಮೇಳ ಈಗ ನಿನದು

ಒಡಕೊಡೆಯಲ್ಲಿ ನಿನ್ನ ಧ್ವನಿ ಹಿರಿದು

ಇದು ನ್ಯೂಟನ್ ಮೂರನೇ ನಿಯಮ

ತಿರುಚಬೇಡ ವಿಜ್ಞಾನ ಬೇಕಿದ್ದರೆ ಇತಿಹಾಸ