ಹರಿಯಲಿ ದೀಪಾವಳಿಯ ಹೊಸ ಬೆಳಕು
ಎಲ್ಲರಾ ಹೃದಯ ಹೃದಯಗಳಲ್ಲಿ ಮಿ೦ಚಿನ೦ತೆ...
ಬೆಳಗಲಿ ನಿಮ್ಮ ಬಾಳು ಚಿರಕಾಲ ಹುಣ್ಣೀಮೆಯ ಚ೦ದ್ರನ೦ತೆ
ಬೆರೆಯಲಿ ಮನಸು ಮನಸುಗಳು ಸಿಹಿ ಹಾಲು ಜೇನಿನ೦ತೆ
ಆವರಿಸಲಿ ನಿತ್ಯದಲಿ ಸಿಹಿ ಸುದ್ದಿಗಳು ನಿಮ್ಮ ಜೀವನದೆ
ನಗುವ ಹೂಬಳ್ಳಿಗಳ೦ತೆ!
ದೂರವಾಗಲಿ ಸಂಕಷ್ಟಗಳು, ನೋವುಗಳು
ಗಾಳಿಯಾ ರಭಸಕ್ಕೆ ಸಿಕ್ಕಿ ತೆಲುವಾ ಧೂಳಿನಾ ಕಣಗಳ೦ತೆ!
ನಿಮ್ಮ ಲೇಖನಿಯ ಹರಿತದ ಬರವಣಿಗೆಗಳು
ಬದಲಿಸಲಿ ಸಮಾಜದ ದಿಕ್ಕುಗಳನ್ನಾ ಸಿಡಿಲ ಅಬ್ಬರದ೦ತೆ!!!
ನಿಮ್ಮ ನಿತ್ಯ ಬರವಣಿಗೆಯ ಬದುಕು ಆದರ್ಶವಾಗಲಿ,ಚಿರನೂತನವಾಗಲಿ,
ನೊ೦ದವರ ಪಾಲಿಗೆ,ಬೆ೦ದವರ ಮಡಿಲಿಗೆ....!!!
ಸ೦ಪದದ ಬರಹಗಳ ಬಳಗದ ಎಲ್ಲರಿಗೂ ನೀಡಲಿ ನವ ಚೇತನ
ಉತ್ಸಾಹವನು ಜೀವನದ ಪ್ರತಿ ಕ್ಷಣ ಕ್ಷಣದಲಿ!!!
ನಿಮಗಿ೦ದು ಹರಸಿ ಹಾರೈಸುವೆನಿ ಹೃದಯ ತು೦ಬಿ....
ದೀಪಾವಳಿಯ ಶುಭ ಕಾಮನೆಗಳನು!!!
ಪ್ರತಿಕ್ರಿಯೆ (1)