ಚಲುವಿನ ಚಲುವೆಗೆ ಹುಡುಕಾಟ

ಮನದಲಿ ಏನೋ ತೊಳಲಾಟ,

ಹುಡುಕುವೆ ಹೇಗೆ ಚಲುವೇಯನು

ತಿಳಿಯದಾಗಿದೆ ದಾರಿಯನು,

ನನ್ನೆದೆ ಬಡಿದಿದೆ ಡಮರುಗವ

ಅವಳೆದೆ ಮಿಡಿತವ ಕೇಳುವವ

ಮತ್ತೊಂದು ಹುಟ್ಟು ಬೇಕಿದೆ ಇಂದು, ಸಂತಸ ಹಂಚುವೆ ಇನ್ನು ಯೆಂದು.