ಚಿತ್ರಕೃಪೆ:ಅಂತರ್ಜಾಲ

ಮತ್ತೆ ಬಂದಿದೆ ದೀಪಾವಳಿ,
ಮನದಿ ಬೆಳಕ ಪ್ರಭಾವಳಿ.

ಹಣತೆ ಹಣತೆ ಕೂಡೇ ಬೆಳಕು.
ಮನವು ಮನವು ಕೂಡೇ ಬದುಕು.

ಹಣತೆ ಬೆಳಗೇ ಜಗಕ್ಕೆ ಬೆಳಕು.
ಮನವು ಬೆಳಗೇ ಬದುಕೆ ಹೊಳಪು.

ಪ್ರೀತಿ ದೀಪ ಹಚ್ಚಬನ್ನಿ,
ನಗೆಯ ಬೆಳಕ ಹರಡ ಬನ್ನಿ,

ಬನ್ನಿರೆಲ್ಲಾ ಕೂಡಿ ನಾವು ಜಗವ ಬೆಳಗುವ.

ಸಣ್ಣದೊಂದು ನಗುವ ಬೀರಿ ಬೆಳಕ ಹರಡುವ.

ಪ್ರೀತಿ ಭಾವ ಮೂಡಿ ಹಾಡಿ ಹೊಳಪ ಪಸರುವ.