___LINK_OPEN_imageanchor="1" href="http://1.bp.blogspot.com/-hKwmAUt9djQ/TqnUu7-vFAI/AAAAAAAAMSc/mIgve9mYyVc/s1600/IMG_7814_1_2.jpg"___


ಪುಣ್ಯಗೈದರೆ ನಾನು ಹುಟ್ಟುವೆನು ಮುಂದೊಮ್ಮೆ

ಬಿದಿರಾಗಿ ಯಮುನೆಯ ದಡದ ಮೆಳೆಯೊಳಗೆ;

ಆ  ಬಿದಿರು ಕೊಳಲಾಗಿ ಪಡೆದರೂ ಪಡೆದೀತು

ಗೋಪಕುವರನ ರನ್ನ ತುಟಿಗೊತ್ತುವಾ ಸೊಗಸು!

 

 

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ೨-೯):


ಅಪಿ ಜನುಷಿ ಪರಸ್ಮಿನ್ನಾತ್ತಪುಣ್ಯೋ ಭವೇಯಂ

ತಟ ಭುವಿ ಯಮುನಾಯಾಸ್ತಾದೃಶೋ ವಂಶನಾಳಃ |

ಅನುಭವತಿ ಯ ಏಷಶ್ಶ್ರೀಮದಾಭೀರ ಸೂನೋಃ

ಅಧರಮಣಿ ಸಮೀಪನ್ಯಾಸಧನ್ಯಾಮವಸ್ಥಾಂ ||


-ಹಂಸಾನಂದಿ


ಕೊ: ಅನುವಾದದಲ್ಲಿ  ಸಲಹೆ ನೀಡಿದ, ಮತ್ತೆ ಅವರು ತೆಗೆದ ಚಿತ್ರವನ್ನು ಬಳಸಲು ಸಮ್ಮತಿಸಿದ ಗೆಳೆಯ ಶ್ರೀನಿವಾಸ್ ಪಿ ಎಸ್ ಅವರಿಗೆ ನಾನು ಆಭಾರಿ