ಕರುನಾಡು ಕಸ್ತೂರಿಯ ಕಂಪಲಿ ತೇಲಿದೆ
ಹೆಸರಲ್ಲೆ ಗಂಧದ ಸುವಾಸನೆಯ ಚಲ್ಲಿದೆ
ಸಂಸ್ಕೃತಿಯ ತವರೂರು ಇದಾಗಿ ಮೆರೆದಿದೆ
ಇದನೊಗಳಲು ಇಂದು ಪದಗಳೇ ಮುಗಿದಿದೆ.
ಎಲ್ಲಾ ಜ್ಞಾನಿಗಳ ತತ್ಸಮರು ಇಲ್ಲಿಹರು
ಸಂಗೀತ ಪ್ರಕಾರಗಳ ಪಿತಾಮಹರು ಇಲ್ಲಿಹರು
ಮಹಾಭಾರತದಲಿ ಏಕಲವ್ಯ ಒಬ್ಬನಾಗಿ ಬರುವನು
ಕರುನಾಡಲ್ಲಿ ಹುಡುಕಲೊರಟರೆ ಉರಿಗೊಬ್ಬ ಸಿಗುವನು.
ಕಲೆ, ಶಿಲ್ಪ, ವಿಚಾರಗಳು ಗಾಳಿ ಬೆಳಕಿನಂತವ
ವಿಜ್ಞಾನ ವಿಸ್ಮಯಗಳು ಬೆಳೆಯಂತೆ ಬೆಳದವ
ಎಲ್ಲರನು ಕನ್ನಡ ನೆಂಟರೆಂದೆ ಬಾಚಿ ತಬ್ಬದ
ನಾವೆಲ್ಲ ಮನುಜರೆಂಬ ದಿವ್ಯ ಮಂತ್ರ ಜಪಿಸದ.
ನರ ನಾಡಿ ಅಣುವೆಲ್ಲವು ಕನ್ನಡಾಂಬೆ ತಾಯದು
ನಾವಾಡುವ ನುಡಿಯಲ್ಲೇ ತುಂಬಿಹುದು ಅಮೃತವು
ಇದು ಬರಿ ಭಾಷೆಯಲ್ಲ ಜೀವ ನಡೆಸುವಾತ್ಮವು
ವಿಶ್ವವನ್ನೆ ಒಂದೆ ಎಂದ ತಾಯಿ, ನಮ್ಮ ಕನ್ನಡ.
ರಚನೆ: ಜೈ ಕಿಸಾನ್
ಸಂಕಲನ : ಭಾಗ ೨
ಪ್ರತಿಕ್ರಿಯೆ (4)