ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಹಿಂದಿನ ಸಿಪ್ 

 

ಸಿಪ್- ೭


೮೩೦ಕ್ಕೆಕಣ್ಣುಬಿಟ್ಟಾಗಹೊರಗಿನಬಯಲಿಂದಸೂರ್ಯನಕಿರಣಗಳುಕಣ್ಣಪರದೆಯನ್ನುಮುಟ್ಟಿತ್ತು. ಆವರಿಸಿದಮಂಜುಮೆಲ್ಲನೆಆವಿಯಾಗಿಮಾಯವಾಗುತಿತ್ತು. ಕಾಲೇಜ್ತರಗತಿಗೆಹೊಸವರ್ಷದರಜೆ.ಶನಿವಾರಬಟ್ಟೆಹಾಸ್ಟೆಲ್ನಲ್ಲಿಒಗೆಯಲುಕೊಡುವದಿನಅದುನೆನಪಾಗಿಎದ್ದುನಾನುರವಿಯರೂಂನಿಂದಹೊರಬಂದೆ.ಶೆಟ್ಟಿಆಗಲೇಎದ್ದಿದ್ದ. ಹಿಂದಿನದಿನಮಾಡಿದಹೊಲಸನ್ನುಸಾರಿಸಿತೆಗೆಯುವುದರಲ್ಲಿವ್ಯಸ್ತನಾಗಿದ್ದ. ಬಳಿಯಲ್ಲೇಒಂದುನಾಯಿಮರಿತಿಂದುಬಿಟ್ಟಎಲುಬನ್ನುಕಚ್ಚಿತಿನ್ನುತ್ತಿತ್ತು.ಎರಡುಕಡೆಯಲ್ಲಿಅಮಲೇರಿ ಖಾರಿದಕೊಕ್ಟೈಲ್ಭೂಮಿಯೊಳಗೆಇಳಿಯುತ್ತಿತ್ತು. ಇದರನಡುವಲ್ಲಿಬಿದ್ದಅಪ್ಪಟಕುಡುಕರನ್ನುಅವನುತನ್ನರೂಮಿನೊಳಗೆವಿಲಾವರಿಮಾಡಿದ್ದ.


ನನ್ನನ್ನುನೋಡಿಕೈಗೊಂದುಗೋಣಿಚೀಲಕೊಟ್ಟುಅದನ್ನುಪಕ್ಕದಚರಂಡಿಯಲ್ಲಿಹಾಕುವಂತೆಹೇಳಿದ. ಅದರಲ್ಲಿಬರೋಬ್ಬರಿ೧೦ರಿಂದ೧೫ಕಿಲೋಸರಿಯಿದ್ದ, ಒಡೆದುಚೂರಾದಮದ್ಯದಬಾಟಲುಗಳಿದ್ದವು.ನಾನುಸರಿಎಂದುಹೊರಬರಲುಕಾಂಪೌಂಡ್ಓನರ್ಎದುರಾದ.


ಮರೆಮಾಚುವಕೆಲಸದಲ್ಲಿಬ್ಯುಸಿಆಗಿದ್ದನಾವುಅವರನ್ನುನೋಡಿತಬ್ಬಿಬ್ಬಾದೆವು. ಶೆಟ್ಟಿಕ್ಷಣಮಾತ್ರದಲ್ಲಿ " ಅಂಕಲ್ಹ್ಯಾಪಿನ್ಯೂಇಯರ್ !!!" ಅಂದ.

ಅವರು "ದಾದಯ ...? ಉಂದುಮಾತಾ?" (ಏನೋ ...? ಇದೆಲ್ಲಾ ..?)

ಶೆಟ್ಟಿಸಲ್ಪತಡೆದು " ಜೋಕ್ಳುಅತ್ತೆ, ಗಮ್ಮತ್ಮಲ್ಪಾಡ್." ಅಂದ.

"ಗಮ್ಮತ್ಏತುಉಪ್ಪೋಡುಆತ್ಉಪ್ಪಂಡಯಾವು" ಅಂದರು.

ಶೆಟ್ಟಿಅವರಲ್ಲಿ "ಅಂಕಲ್, ಈರೆಗ್ಲಒಂಜಿಗಿಫ್ಟ್ನಮದೆತ್ತದ್ದೀತ (ನಿಮಗೂಒಂದುಗಿಫ್ಟ್ತೆಗೆದಿಟ್ಟಿದ್ದೇವೆ)"ಈಮಾತುಕೆಳುತಿದ್ದಂತೆಅವರೂಮುಗುಳ್ನಕ್ಕರು.

ಶೆಟ್ಟಿ "ಅಂದಾಅಲ್ಪಉಳೈದೆತ್ತದ್ದೀನಬಾಟಲ್ಇಂಚಿಕೊರಿಯಾ"(ಅಲ್ಲಿತೆಗೆದಿಟ್ಟಬಾಟಲ್ಇಲ್ಲಿತಾ) ಎಂದುಒಳಗಿನಕೋಣೆಗೆಬುಲಾವ್ಇಟ್ಟ.


ಒಳಗಿಂದಸ್ಟೀಫನ್ಆಬಾಟಲ್ನೋಟ್ಟಿಗೆಹೊರಬಂದ. ಸ್ಟೀಫನ್ಅನ್ನುಬಾಟಲ್ನೊಂದಿಗೆನೋಡಲುಹೊರನಿಂತಅವನತಂದೆಅವಕ್ಕಾದರು.!!!


ಸ್ಟೀಫನ್ನಮ್ಮಜೂನಿಯರ್ಈವರ್ಷಕಾಲೇಜ್ಗೆಜೋಯಿನ್ಆಗಿದ್ದ, ನಿನ್ನೆಕಂಬೈನ್ಸ್ಟಡಿಮಾಡೂದಿದೆಎಂದುಹೇಳಿಇಲ್ಲಿಉಳಿದಿದ್ದ.ಮಗನನ್ನುಈವೇಷದಲ್ಲಿನೋಡಿಅವರುಎರಡನೇಮಾತಾಡದೆತರಕಾರಿತೋಟದೆಡೆಗೆನಡೆದರು.


ಶೆಟ್ಟಿಎಲ್ಲಬೂದಿಯನ್ನುಒಟ್ಟುಮಾಡಿಗಿಡದಬುಡಕ್ಕೆಸುರುವಿದ.ನಾನುಕೈಯಲ್ಲಿದ್ದ   ಅಸ್ತಿಯನ್ನುಹೊರಗಿನತೋಡಿನಲ್ಲಿವಿಸರ್ಜಿಸಿ, ಹಾಸ್ಟೆಲ್ತಲುಪಿದೆ.

 

***********




ಅವಳುನಾನು '೧೪ಮಿನಿಟ್೪೫ಸೆಕೆಂಡ್ಸ್ಲೇಟ್' ಅನ್ನುವುದುಬೇಡಎಂದು೭ನಿಮಿಷಮುಂಚಿತವಾಗಿ  ೩ : ೫೩ಕ್ಕೆಆಮಾಲ್ತಲುಪಿದೆ. ಬಳಿಯಲ್ಲೇಇದ್ದಏಟಿಎಂಮಷಿನ್ನಿಂದ೧೦೦೦ರುಪಾಯಿತೆಗೆದುಕೊಂಡೆ. ಪಕ್ಕದಲ್ಲೇಇದ್ದಚಾಕೊಲೆಟ್ಅಂಗಡಿಯಿಂದಒಂದುಕ್ಯಾಡ್ಬರೀಸ್ತೆಕ್ಕೊಂಡುಮಾಲ್ನಹೊರಆವರಣದಕಾರಂಜಿಯಬಳಿನಿಂತುಕ್ಕೊಂಡೆ.


ಕಡುನೀಲಿಬಣ್ಣದಸಲ್ವಾರ್ನಲ್ಲಿಬಂದಪ್ರೀತಿಯನ್ನುನೋಡಿಅವಳುನನ್ನನ್ನುಇಂಪ್ರೆಸ್ಮಾಡಲುನನ್ನಇಷ್ಟದಬಣ್ಣದಉಡುಗೆಉಟ್ಟುಬಂದಿರುವಳುಅಂದುಕ್ಕೊಂಡೆ. ಅಸಲಿಗೆಈಲಾಜಿಕ್ಅನ್ನುನಾನುಅನುಸರಿಸಿದ್ದೆ. ಅವಳಇಷ್ಟದಕಪ್ಪುಟೀ-ಶರ್ಟ್ನಾನುತೊಟ್ಟುಬಂದಿದ್ದೆ.


ಆಟೋದಿಂದ ಇಳಿಯುತ್ತಲೇನನ್ನನೋಡಿಮುಗುಳ್ನಗುತ್ತಾಆಟೋಅವನಿಗೆ೧೦೦ರಒಂದುಗರಿಗರಿನೋಟನ್ನುಕೊಟ್ಟಳು.ಅವನುಚೇಂಜ್ಕೊಡುವಂತೆಹೇಳಲುತನ್ನಕೈಚೀಲವನ್ನೆಲ್ಲಾಹುಡುಕಾಡಿದಳು. ಎಲ್ಲೂಸಿಗದೇನನ್ನಲ್ಲಿ "ವೈಭು೧೪ರುಪಾಯೀಇದೆಯೇನೋ ..." ಅಂದಳು.


ಅವಳುಕೇಳಿದಮೊದಲಸಹಾಯ. ನಾನುಹೌದೆಂದುಸೀದಾಅವಳಿದ್ದಲ್ಲಿಗೆ ಹೋಗಿಆಚಾಕೊಲೆಟ್ಅಂಗಡಿಯವಕೊಟ್ಟ೨೦ರನೋಟನ್ನುಅವನಿಗೆಕೊಟ್ಟೆ. ಅವನು೫ರುಪಾಯಿಹಿಂತಿರುಗಿಸಿದ. ೧ರುಪಾಯೀಅವನಿಗೆಟಿಪ್ಸ್ಆಗಿಬಿಟ್ಟುಕೊಟ್ಟೆ.


ಇಬ್ಬರೂನಿನ್ನೆಕುಳಿತಅದೇಟೇಬಲ್ಮೇಲೆಕುಳಿತಿದ್ದೆವು. ಅದೇಕೆಂಪುಕತ್ತಿನವೈಟರ್ಬಳಿಬಂದುಆರ್ಡರ್ತೆಕ್ಕೊಂಡ. ಅವನಲ್ಲಿನಾನುಏನಾದ್ರೂಸ್ಪೆಷಲ್ಐಟಂಸರ್ವಮಾಡುಅಂದೆ.


ಅವನುಇಟೆಲಿಯನೋಹಾಟ್ಕಾಫಿವಿಥ್ಚಿಲ್ಲೆಡ್ವೆನಿಲ್ಲಾಕ್ರೀಂನಹೆಸರುಹೇಳಿದ . ಅದಕ್ಕೆನಾನುಓಕೆಹೇಳಿತಿನ್ನಲುಪೇಸ್ಟ್ರೀಯಾವುದಾದರುಹೇಳಲುಹೇಳಿದೆ.

ಅವನುಮೇಡ್ಫಾರ್ಈಚ್ಅದರ್ಚೋಚೋಪೇಸ್ಟ್ರೀರೆಕಮೆಂಡ್ಮಾಡಿದ. ಅದಕ್ಕೂಹ್ಮ್ ಅಂದೆ.


"ಸರಿಹೇಗಾಯ್ತುನ್ಯೂಇಯರ್ಪಾರ್ಟಿ" ಇವತ್ತು ನಾನಾಗಿಯೇ ಮಾತು ಶುರು ಮಾಡಿದೆ

"ಚೆನ್ನಾಗಿತ್ತು,  ಡಿಜೆಅಂತೂಸೂಪರ್!!! ನಿಂದು ಹೇಗಾಯ್ತು...?"

"ಸುಮಾರಾಗಿಯೇ ಇತ್ತು."

"ಸುಮಾರು ಅಂದ್ರೆ ..? ಏನಾದ್ರು ರೆಗುಲರ್ ಕ್ಕಿಂತ ಹೊಸತ್ತೆನಾದ್ರು ಮಾಡಿದೆಯಾ...?"

"ಹ್ಮ್ ರೆಗುಲರ್ ಇರಲಿಲ್ಲ, ಮೊದಲಬಾರಿಗೆ ಹೊಸ ಅನುಭವ ಪಡೆವ ಹೊಸ್ತಿಲಲ್ಲಿದ್ದೆ!!!"

"ಅಂದ್ರೆ ?"


ನಿದ್ರೆ ಬಾರದೆ ಬರೇ ನಿನ್ನ ನೆನಪಲ್ಲೇ ಕನವರಿಸುತಿದ್ದೆ ಅನ್ನಬೇಕು ಅನ್ನಿಸಿತು ಕೊನೆಗೆ "ಏನು ಇಲ್ಲ" ಅಂದು ಸುಮ್ಮನಾದೆ.


ಅಷ್ಟರಲ್ಲೇ ವೈಟರ್ ಬಂದು ಹೇಳಿದ ಕಾಫಿ ಮತ್ತು ಪೇಸ್ಟ್ರೀನಮ್ಮ ಟೇಬಲ್ ಮೇಲಿಟ್ಟ.

ಆರಿಂಚು ಉದ್ದದ ಗಾಜಿನ ಗ್ಲಾಸ್ನಲ್ಲಿ ಐಸ್ ಕ್ರೀಂ ನ ನೊರೆ ಕೆಳಗಿಳಿಯುತ್ತಿತ್ತು. ಹೃದಯದಾಕಾರದ ಮೇಡ್ ಫಾರ್ ಈಚ್ ಆದರ್ ಪೇಸ್ಟ್ರೀಯ ನಡುವಲ್ಲಿ ಚೆರ್ರಿ ಸುಂದರವಾಗಿ ಕಾಣುತಿತ್ತು.


ಇಬ್ಬರು ಗ್ಲಾಸನ್ನು ಕೈಯಲ್ಲಿ ಹಿಡುದು ಕರಗುತ್ತಿರುವ ಐಸ್ ಕ್ರೀಮನ್ನು ಸ್ಪೂನ್ ನಲ್ಲಿ ಎತ್ತಿ ಬಾಯಿಗೆ ಹಾಕುತಿದ್ದೆವು.ನಾನು ನಿನ್ನೆ ನಿಲ್ಲಿಸಿದ ಟಾಪಿಕ್ ಮತ್ತೆ ಶುರು ಮಾಡಿದೆ.

"ನಿನ್ನೆ ನೀನು ಇವತ್ತಿಗೆ ಮುಂದೂಡಿದ ಟಾಪಿಕ್ ..." ಅಂದೆ.

ಅವಳು "ಏನದು ಟಾಪಿಕ್"

"ಅದೇ ನಿನ್ನ 1942 A Love Story !!!"

"1942 A Love Story ನಾ ...ಅದೂ ನನ್ಗೆ...?"


ಅವಳ ಈ ಮಾತು ಕೇಳಿ ಹೋದ ಜೀವ ಮತ್ತೆ ಬಂದಂತಾಯಿತು. ನಿನ್ನೆಯ ರಾತ್ರಿ ಇಡೀ ಇವಳ ಲವ್ ಸ್ಟೋರಿಯಲ್ಲಿನ ಹಳೇ ನಾಯಕನ ಕುರಿತು ಆಲೋಚಿಸಿ ನಿದ್ದೆ ಹಾಳು ಮಾಡಿಕ್ಕೊಂಡಿದ್ದೆ. ಇವಳಿಗೆ ಲವ್ ಸ್ಟೋರಿಯೇ ಇಲ್ಲಂತಾದರೆ ಆ ನಾಯಕ ಎಲ್ಲಿಂದ ಬಂದಾನು ಎಂದು ಆಲೋಚಿಸಿ ಮತ್ತೆ ಖುಷಿಯಾಯಿತು.ಅದರೂ ಖಾತ್ರಿ ಪಡಿಸುವ ಸಲುವಾಗಿ ಇನ್ನೊಮ್ಮೆ ಅವಳಲ್ಲಿ "ನಿಜವಾಗಲು ನಿನಗೆ ಲವ್ ಸ್ಟೋರಿ ಇಲ್ಲವಾ " ಅಂದೆ.


ಅವಳು "1942 !!! ಹೇ ನನ್ನ ಅಜ್ಜಿದ್ದು ಲವ್ ಸ್ಟೋರಿ ಇದ್ರೂ ಇರಬಹುದು !!!" ಅನುತ್ತ ಮುಗುಳ ನಕ್ಕಳು.

ನೀಲ ಸುಂದರಿ ಇನ್ನೂ ಸುಂದರವಾಗಿ ಕಾಣುತಿದ್ದಳು ಆದರೂ ಏನೋ ಕೊರತೆ, ಆ ನ್ಯುನ್ಯತೆಯನ್ನು ಹುಡುಕುತ್ತಿರುವ ನನ್ನ ಕಣ್ಣು ಮತ್ತು ಮನಸನ್ನು ಎದುರು ಕಾಫಿ ಹೀರುತ್ತಿರುವ ಪ್ರೀತಿ ಒಂದೇ ಬಾರಿಗೆ ತಡೆದು "ಏನೋ ..? ಏನಾಯ್ತು ಎಲ್ಲಿ ಕಳೆದು ಹೋದಿ.. ಓ ಭಾವ ಜೀವಿ ...!!!" ಅಂದಳು.


ಅಯಿನ್ ಸ್ಟೀನ್ ಗೆ ಸ್ನಾನ ಮಾಡುವಾಗ ಹೊಳೆದ ಸಾಪೇಕ್ಷಿತಾವಾದದಂತೆ ಅವಳ ಸುಂದರತೆಯ ನ್ಯೂನತೆಗೆ ಕಾರಣ ತಿಳಿದು ಗೊಜಲಿನಲ್ಲಿ ಮುಳುಗಿದ್ದ ಮನಸ್ಸು ನಗ್ನವಾಗಿ ಖುಷಿ ಪಟ್ಟಿತು. ಒಳಗೆ ಎದ್ದ ಈ ಅಲೆಯನ್ನು ಗುರುತಿಸಿ ಅವಳು ಕಣ್ಣಿನಲ್ಲೇ ಅದರ ಕಾರಣ ಏನೆಂದು ಕೇಳಿದಳು.


ನಾನು "ನೀನು ಚೆನ್ನಾಗಿ ಕಾಣುತಿದ್ದಿಯ, ನೀನು ಇನ್ನೂ ಚೆನ್ನಾಗಿ ಕಾಣಬಹುದು"

ಅವಳು "ಅಂದ್ರೆ ...?"

"ಒಂದು ಬಿಂಧಿ ನಿನ್ನ ಸೌಂದರ್ಯವನ್ನು ಇನ್ನೂ ಮೇಲಕ್ಕೆ ಎತ್ತಿ ಹಿಡಿಯುತ್ತೆ !!!"

"ಹೋ, ಯಜಮಾನ್ರು ಈ ಅನ್ವೇಷಣೆಗಾ ನನ್ನ ಆರ್ಕುಟ್ ಪ್ರೊಫೈಲ್ ಅನ್ನು ಕಳೆದ ಒಂದು ವಾರದಲ್ಲಿ ಹಲವು ಬಾರಿ ವಿಶ್ಲೇಷಿಸಿದ್ದು.." ಅಂದಳು.


ಮೌನವಾಗಿದ್ದೆ. ಅವಳ ಆರ್ಕುಟ್ ಪ್ರೊಫೈಲ್ ನೋಡಲು ಅದು ಅವಳ ಗಮನಕ್ಕೆ ಬರುವುದು ಎಂಬುದನ್ನು ಮರೆತಿದ್ದ ನನಗೆ ಈಗ ಏನು ಹೇಳಬೇಕೋ ತಿಳಿಯಲಿಲ್ಲ.ಅವಳು ಮುಂದುವರಿಸಿದಳು "ಏನ್ ಯಜಮಾನ್ರೆ ಸಮಾಚಾರ..? ವಿರಹಿ ಯಿಂದ ಮತ್ತೆ ಚಾಕೋಲೆಟ್ ಹೀರೋ ಅಗೋ ಬಯಕೆನಾ ...??" ಅಂದಳು.

ಏನೂ ತೋಚದೆ ಕೈಯಲ್ಲಿದ್ದ ಸ್ಪೂನ್ ನಿಂದ ಆಗಲೇ ಕೆಳಗಿನ ಬಿಸಿ ಕಾಫೀಯಲ್ಲಿ ಅರ್ಧ ಕರಗಿರುವ ಐಸ್ ಕ್ರೀಮ್ ಅನ್ನು ಇನ್ನೂ ಕರಗಿಸಿದೆ. ಅವಳು ಮುಂದುವರಿಸಿದಳು.

 

"ನೀನು ಕೇಳಿದೆಯಲ್ಲ ನನ್ನ 1942 A Love Story ಬಗ್ಗೆ.. ಹೇಳ್ತೇನೆ ಕೇಳು"

"ನೀನೆ ಅಂದಿಯಲ್ಲ 1942 A Love Story ಏನಿಲ್ಲ ಎಂದು..!!!"

"ಹ್ಮ್ ಹೌದು ಇದು ಅಷ್ಟು ಹಳತಲ್ಲ !!! ತೀರ ಹೊಸದ್ದು ೨೦೦೨ ನದ್ದು !!!"


ಕೈಯಲ್ಲಿದ್ದ ಸ್ಪೂನ್ ತನ್ನ ಚಲನೆಯನ್ನು ನಿಲ್ಲಿಸಿತು, ಗ್ಲಾಸ್ ನಲ್ಲಿ ಕರಗಿ ಬುಡ ಸೇರುತ್ತಿರುವ ಐಸ್ ಕ್ರೀಮ್ ನನಗೆ ಕಾಫೀಯ ಸುಳಿಯಲ್ಲಿ ಸಿಲುಕಿ ಒದ್ದಾಡುವಂತೆ ಕಂಡುಬಂತು. ಇಲ್ಲಿ ಮನಸ್ಸು ಮತ್ತೆ ಗೊಂದಲದ ಗೂಡಿನಲ್ಲಿ ಬೇಗುತ್ತಾ "ಯಾರು ...?" ಅಂದಿತು.


ಅವಳು "ವಿವೇಕ್ , E & E ಫೈನಲ್ ಇಯರ್" ಅಂದಳು.


ವಿವೇಕ್ ಹೆಸರು ಎಲ್ಲೋ ಕೇಳಿದಂತಿತ್ತು. ಹೌದು ಅವನೇ ನಿನ್ನೆ ರಾತ್ರಿ ತೂರಾಡಿದ ಹುಡುಗ, ನನಗೆ ಸ್ಪ್ರೈಟ್ ಹೇಳಿ ವೋಡ್ಕಾ ಕೊಟ್ಟವ.


ನಿನ್ನೆ ಶೆಟ್ಟಿ ಕುಡಿದು ಅಮಲಾಗದಂತೆ ತಡೆದಿದ್ದ, ಇಲ್ಲಿ ಅವನ ಹೆಸರು ಕೇಳುತಿದ್ದಂತೆ ಕಿಕ್ಕು ಏರಿ ಹೋಗಿತ್ತು, ಆದರೆ ಅಮಲಿನ ಕಿಕ್ಕಲ್ಲ, ಮನಸಿನಲ್ಲಿ ಮೂಡಿದ ಪ್ರೇಮವನ್ನು ಕಿತ್ತ ಧ್ವೇಶದ ಕಿಕ್ಕು.


ಎದುರಲ್ಲಿ ಕುಳಿತ ಪ್ರೀತಿ ಮೇಡ್ ಫಾರ್ ಈಚ್ ಆದರ್ ಪೇಸ್ಟ್ರೀಯನ್ನು ಬದಿಯಲ್ಲೇ ಇದ್ದ ಫಾರ್ಕ್ನಿಂದ ನಡುವಲ್ಲಿ ಎರಡು ಭಾಗ ಮಾಡಿದಳು. ಅವಳು ತುಂಡರಿಸಿದ್ದು ಹೃದಯದಾಕಾರದ ಪೇಸ್ಟ್ರೀಯನ್ನೇ, ಆದರೆ ರಕ್ತ ಸುರಿಯುತಿದ್ದದ್ದು ಒಂದು ವಾರದಿಂದ ಅವಳಿಗಾಗಿಯೇ ಬಡಿಯುತಿದ್ದ ನಿಜದ ಹೃದಯದಿಂದ.

 

ಅವಳಾಗಿಯೇ ಹಲವು ಪ್ರಶ್ನೆಗಳನ್ನು ನನ್ನ ಎದುರಿಗೆ ಇಟ್ಟಳು, ನಾನು ಉತ್ತರಿಸಿದೆ.

ನನ್ನಲ್ಲಿ ಹೇಳಲು ಇರುವ ವಿಚಾರ ನನ್ನಲ್ಲೇ ಉಳಿದು ಹೋಯಿತು.


೧೫ ನಿಮಿಷದಲ್ಲಿ ಪೇಸ್ಟ್ರೀ, ಕಾಫಿ ಮುಗಿಸಿ ಅವಳನ್ನು ಅವಳ ಮನೆವರೆಗೆ ಬಿಟ್ಟು ಪೇಂಟ್ ಜೇಬಿನಲ್ಲಿದ್ದ ಡೈರಿ ಮಿಲ್ಕ್ ಅನ್ನು ಅವಳಿಗೆ ಕೊಟ್ಟು "This is for you my sweet friend, will be sweet friends forever !!!" ಎಂದು ಬೈಕನ್ನು ಸ್ಟಾರ್ಟ್ ಮಾಡಿದೆ.


ಅವಳು ತಿರುಗಿ ನನಗೆ ಬಾಯ್ ಅನ್ನುತ್ತಾಳೆಯೇ ಎಂದು ನೋಡಲು ಕಂಬನಿ ತುಂಬಿಕ್ಕೊಂಡಿರುವ ಕಣ್ಣು ಬಿಡಲಿಲ್ಲ. ವಿಕ್ಟರ್ ನ ವೇಗ ಹೆಚ್ಚಿಸಿಕ್ಕೊಂಡೆ, ಕಂಬನಿಯೂ ತನ್ನ ಒಸರನ್ನು ಹೆಚ್ಚಿಸಿಕ್ಕೊಂಡಿತು.


ಮುಂದಿನ ಸಿಪ್