ವ್ಯಕ್ತಿತ್ವದಂತೆ ಹಾವ ಭಾವ ನಡೆನುಡಿಯು
ಸಂಸ್ಕೃತಿಯಂತೆ ಮನದ ಕಾರ್ಯವೈಖರಿಯು
ಆಲೋಚನೆ, ಅವಲೋಕನೆಯಂತೆ ಸಾಧನೆಯು
ಸಾಧನಾ ಪಥದಲಿ ಸಾಗು ನೀ-ನನ ಕಂದ
ನಮ್ಮ ನಾಡು ಕನ್ನಡ, ನಮ್ಮ ನುಡಿ ಕನ್ನಡ, ನಮ್ಮ ಸಂಸ್ಕೃತಿ ಕನ್ನಡ . ನಮ್ಮ ವ್ಯಕ್ತಿತ್ವ ಅದಕ್ಕನುಗುಣವಾಗಿ ಅರಳಲಿ. ನಮ್ಮ ಆಲೋಚನೆ ಅದಕ್ಕೆ ಪೂರಕವಾಗಿರಲಿ. ಸಾಧನಾ ಪಥ 'ಸಂಪದ'ಬಳಗದ ನಮ್ಮದಾಗಲಿ, ಕನ್ನಡ ಸಂಪದತೇರನಲಂಕರಿಸಿ ಎಳೆಯುವ ಶಕ್ತಿ ದ್ವಿಗುಣವಾಗಲಿ ಎಂದು ಆಶಿಸುತ್ತಾ ಸಂಪದ ಪರಿವಾರದವರಿಗೆಲ್ಲರಿಗೂ 'ಕನ್ನಡ ರಾಜ್ಯೋತ್ಸವದ ಶುಭಾಶಯ'ಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!