ಏನಾದ್ರು ಗೀಚಿ ತುಂಬ ದಿನಾಯ್ತು ಅನ್ಸುತ್ತೆ, ಕಾರಣ ಬಹುಶಃ ಹೊಸ ಸಂಸ್ಥೆಗೆ ಹೊಸ ಸಂಗಡಕ್ಕೆ ಹೊಂದಾಣಿಕೆಯಲ್ಲಿ ಸಮಯ ಕಳೆದೋಯ್ತು. ಸುಮ್ನೆ ಏನಾದ್ರು ಬರೀಬೇಕು ಅಂತ ಅವಗವಾಗ್ ಅನಿಸ್ತ ಇರುತ್ತೆ; ಮೌನದಲ್ಲಿ ಯೋಚಿಸ್ತಾ ಇದ್ದರೆ ಸಾವಿರಾರು ಯೋಜನೆ ಆಗುತ್ತೆ, ಆದ್ರೆ ಬ್ಲಾಗ್ ಬರಹ ಆಗೋದು ಒಂದೋ ಎರಡೋ :)
ಇ ಎಫ್ ಐ ಗೆ ಸೇರಿ ಮೂರೂ ಮಾಸವಯ್ತು, ಮೊದಲ ದಿನದದಿಂದ ನನಗೆ ಆಕರ್ಷಿಸಿದ್ದು ಇಲ್ಲಿನ "ಬ್ರೇಕ್ ಔಟ್ ಏರಿಯ" - ಕೆರೆಯ ಅವಲೋಕನ. ನನ್ನ ಸ್ಥಳದಿಂದ ಹತ್ತೇ ಹೆಜ್ಜೆ ದೂರವಿರುವ ಈ ಜಾಗಕ್ಕೆ ದಿನಕ್ಕೆ ನಾನಾ ಬಾರಿ ಬೆಳಗೆ ಮಧ್ಯಾನ ಸಂಜೆಯಾಗಲಿ, ಕಛೇರಿಂದ ಅಥವ ಕ್ಯಾಫೆಟೆರಿಯಿಂದ ವಿರಾಮ ವೇಳೆ ಮಾತ್ರ ಅಲ್ಲ, ಖುಷಿಯಾದಾಗ, ಬೇಸರಾದಾಗ, ಮಳೆಬಂದಾಗ, ಮೋಡ ಕವಿದಾಗ ಹೀಗೆ ಹಲವು ಬಾರಿ ಅಲೆದಡ್ತಾ ಇರ್ತಿನಿ ಆದರೆ ಪ್ರತಿಬಾರಿ ಏನೋ ವಿಶೇಷ ಆಹ್ಲಾದ ಅನುಭವ.
ಮೊನ್ನೆ ಹೀಗೆ ನೋಡಬೇಕಾದ್ರೆ ಮೋಡ ಕವಿದ ದೃಶ್ಯ ಕ್ಷಣರ್ದದಲ್ಲಿ ಹೂ ಹನಿ ಎಲ್ಲ ಕಡೆ ಮೋಡ ಮುಚ್ಚುತ ಮಳೆ ಜೋರಾಯ್ತು, ಸುತ್ತ ಮುತ್ತ ಕಾಣುವ ಕಟ್ಟಡಗಳೆಲ್ಲ ಕಣ್ಮರೆಯಾಯಿತು.ಕೆರೆಗೆ ಮಳೆಹನಿ ಸೇರುತ್ತಿತು, ಪಕ್ಕದಲಿದ್ದ ಮರಗಿಡಗಳು ಆ ತಂಗಾಳಿಯಲ್ಲಿ ವರ್ಷದೊಂದಿಗೆ ಹರ್ಷಿಸುತಿತ್ತು. ಸ್ವಲ್ಪ ಸಮಯಾ ಕೊಳ ಮತ್ತು ಹಸಿರಿನ ಸಂಗಮದ ದೃಶ್ಯ ಕಣ್ಣಿಗೆ ಹಬ್ಬವಾಗಿತ್ತು. ಕೆಲವೇ ನಿಮಷದಲ್ಲಿ ಗಾಳಿ ಮತ್ತು ಮಳೆಯಾ ಮಿತಿ ಕಡಿಮೆಯಾಯಿತು. ಬೆಳಕು ಹಾಗೆ ಮೂಡುತ್ತಿತ್ತು, ಆವಾಗ ಒಂದು ಮಿಂಚು ಮೂಡಿದ ತಕ್ಷಣ ಅಲ್ಲಿದ್ದ ಹಸಿರು ಹಸಿರೊಂದಿಗೆ ಕಂಗೊಳಿಸುತ್ತಿತ್ತು ನನ್ನ ಚಿತ್ತದಲಿ ಹೀಗೊಂದು ಉದ್ಗಾರವಾಯಿತು - "ಮಳೆಯಲ್ಲಿ ಮೀದ ಮರವು ಮಿಂಚಿನೊಂದಿಗೆ ಮಿಂಚಿನಂತೆ ಮಿಂಚುತಿದೆ".ಆಮೇಲೆ ಮೋಡವೆಲ್ಲ ಸರಿದು ಬೆಳಕು ಪಸರಿಸಿತು, ಆ ಕೆರೆಯಲ್ಲಿ ಆಕಾಶದ ಬಿಂಬ ನೋಡಿ ಆಗೊಮ್ಮೆ ಹೀಗೆನಿಸಿತು - " ಕೊಳವೆ ಕನ್ನಡಿ ಆಕಾಶದ ಶೃಂಗಾರಕ್ಕೆ".ಇನ್ನು ಮುಸ್ಸಂಜೆಯ ಮೋಜಿನ ಮಾತು, ಈ ಕೆರೆಯ ಕಡೆಯಲ್ಲಿ ನಿಲ್ಲುವ ನಮ್ಮ ಸಂಜೆಯ ಕ್ಯಾಬನ್ನು ಏರಿ ಕೂತಾಗ ಕಾಣುವ ತಾಣ, ದೂರದೇಶದ ನಿಸರ್ಗ ವಾಲ್ ಪೇಪರ್ ಅಂತೆ ಇರುತದೆ. ಎಂತಹ ಸರಳ ಸಹಜ ಸೌಂದರ್ಯದ ಸವಿ :)
ಪ್ರತಿಕ್ರಿಯೆ (5)