ಲೇ ಬ್ಯಾವರ್ಸಿ ಏಳ್ಲಾ ಮ್ಯಾಕೆ ಸೂರ್
ಅವ್ವೋ ಸುಮ್ಕಿರವ್ವ ದಿನ್ ಬೆಳಗಾದ್
ಪುಟ್ಟಕ್ಕ ತನ್ನ ಸಂಸಾರಕ್ಕೆ ಜೀವವನ್ನೇ ತೇಯ್ದಿ
ಈಗ ಬೀರಯ್ಯ ಹೋಗಿ ಹದಿನೈದು ವರ್ಷ ಆಗ
ಸಿದ್ರಾಮನಿಗೆ ಓದು ತಲೆಗೆ ಹತ್ತಲಿಲ್
ಈ ಮಾತುಗಳನ್ನು ಕೇಳಿ ಪುಟ್ಟಕ್ಕನಿಗೆ
ಹಳ್ಳಿಯ ಜನರೆಲ್ಲಾ ಸಿದ್ರಾಮನಿಗೆ ಬೈಯ್ಯುವರೆ ಅವನೊಬ್ಬ ನಿಷ್ಪ್ರಯೋಜಕ ಯಾವುದಕ್ಕೂ ಕೆಲಸಕ್ಕೆ ಬರುವ ಮನುಷ್ಯ ಅಲ್ಲ ಎನ್ನುತ್ತಿದ್ದರು. ಆದರೆ ಇದ್ಯಾವುದನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ ಸಿದ್ರಾಮ. ಪುಟ್ಟಕ್ಕನ ಒಳ್ಳೆಯ ಗುಣಗಳನ್ನು ನೋಡಿ ಜನ ಸುಮ್ಮನಾಗುತ್ತಿದ್ದರು.
ಆ ವರ್ಷ ಮಳೆ ಇಲ್ಲದೆ ಭೀಕರ ಪರಿಸ್ಥಿತಿ ಉಂಟಾಗಿತ್ತು. ಹಳ್ಳಿಯ ಯಾವ ತೋಟದಲ್ಲೂ ನೀರಿಲ್ಲದೆ ಜನ ಅಷ್ಟಾಗಿ ಬೆಳೆ ಬೆಳೆದಿರಲಿಲ್ಲ. ಹೀಗಾಗಿ ಪುಟ್ಟಕ್ಕನಿಗೂ ಕೆಲಸವಿರಲಿಲ್ಲ. ಕೆಲಸವಿಲ್ಲದೇ ಕೂಲಿ ಇಲ್ಲ. ಪುಟ್ಟಕ್ಕ ಬಂದು ಸಿದ್ರಾಮನನ್ನು ಕುರಿತು " ಲೇ ಮಗಾ ಏಳ್ಲಾ ನಿನ್ ಕೂಡ ಒಸಿ ಮಾತಾಡ್ಬೇಕು ಎಂದಳು. ಗೊಣಗಿಕೊಂಡೆ ಎದ್ದ ಸಿದ್ರಾಮ ಎನವ್ವೋ ನಿಂದು ತಲೆ ನೋವು ಒತ್ತಾರೆ ಒತ್ತಾರೆ ಸುಮ್ಕೆ ಮಲ್ಗಾಕು ಬಿಡಲ್ವಲ್ಲ ಅದೇನ್ ಯೋಳ್ಬೇಕೋ ಏಳು. ನೋಡ್ಲಾ ಮಗಾ ನಿಂಗೆ ಗೊತ್ತೈತೆ ನಂಗೆ ಈ ಕಿತ ಜಾಸ್ತಿ ಕೂಲಿ ಇಲ್ಲ. ಮನ್ಯಾಗೆ ಇದ್ದ ಕಾಸಿಲ್ಲ ಮುಗಿತ ಐತೆ. ಇನ್ಮುಂದೆ ಹೊಟ್ಟೆ ಗತಿಗೆ ಏನ್ ಮಾಡೋದು ಅಂತ ತಿಳಿತಾ ಇಲ್ಲ. ಅದಕ್ಕೆ ನೀನು ಪಟ್ನಕ್ಕೆ ಹೋಗಿ ಒಸಿ ಕೂಲಿ ನಾಲಿ ಮಾಡ್ಲಾ ಮಗಾ. ಹಾಗೆ ಹೇಳಿದ್ದೆ ತಡ ಹಾಸಿಗೆ ಇಂದ ಕೋಪದಿಂದ ಎದ್ದ ಸಿದ್ರಾಮ ಅವ್ವೋ ಏನು ಅನ್ಕೊಂಡಿದಿಯ ನನ್ನ ನಾನು ಪಟ್ನಕ್ಕೆ ಹೋಗಿ ಕೂಲಿ ಮಾಡಬೇಕಾ ಅದೆಲ್ಲಾ ಆಗಕ್ಕಿಲ್ಲ, ನೀನು ಹಿಂಗೆಲ್ಲ ಮಾತಾಡಿದ್ರೆ ನಾನು ಮನೆ ಬಿಟ್ಟು ಒಂಟೋಯ್ತೀನಿ ಅಟೆಯ ಅಂದ. ಈ ಬಾರಿ ಪುಟ್ಟಕ್ಕನಿಗೆ ಕೋಪ ಎಲ್ಲಿತ್ತೋ ಗೊತ್ತಿಲ್ಲ " ಏನ್ಲಾ ಬ್ಯಾವರ್ಸಿ ಮಾತೆತ್ತಿದರೆ ಮನೆ ಬಿಟ್ಟು ಒಂಟೋಯ್ತೀನಿ ಒಂಟೋಯ್ತೀನಿ ಅಂತ ಬೆದರಿಸ್ತೀಯ, ಹೋಗ್ಲಾ ಹೋಗ್ಲಾ ಅದೆಲ್ಲಿ ಹೋಗ್ತ್ಯೋ ಹೋಗು ನಿನ್ ಮಕಕ್ಕೆ ನಾನ್ ಬುಟ್ರೆ ಇನ್ಯಾರ್ಲಾ ಉಣ್ಣಕ್ಕೆ ಇಕ್ತಾರೆ. ನಿನ್ ಯೋಗ್ತೆಗೆ ಸರ್ಕಾರಿ ಕೆಲ್ಸ ಕೊಡ್ತಾರೆನ್ಲ ಮೂದೇವಿ. ಏನೋ ಮನೆ ಬುಟ್ಟು ಒಯ್ತಾನಂತೆ. ನಿನ್ ಅಪ್ಪಯ್ಯ ಮನೆ ಬುಟ್ಟು ಹೋಗಿ ನನ್ನ ಅರ್ಧ ಸಾಯ್ಸವ್ನೆ, ಈಗ ನೀನು ಬುಟ್ಟು ಒಯ್ತೀಯ ಹೋಗು ಮನೆ ಅಲ್ಲ ಈ ಪರ್ಪಂಚನೆ ಬುಟ್ಟು ಹೋಗು ಎಲ್ಲಾದರು ಸಾಯಿ ಹೋಗು. ಸುಮ್ಕೆ ಯಾಕೆ ನನ್ ಹೊಟ್ಟೆ ಉರಿಸ್ತೀಯ ಎಂದು ಅಳಲು ಶುರು ಮಾಡಿದಳು.
ಎನವ್ವೋ ನನ್ನೇ ಸಾಯಿ ಅಂತೀಯ ಸಾಯ್ತೀನಿ ಹೋಗು ಅಂತ ಹೇಳಿ ಹೊರಟೆ ಬಿಟ್ಟ. ಮಧ್ಯಾಹ್ನ ಆಯ್ತು, ಸಂಜೆ ಆಯ್ತು ಇನ್ನ ಸಿದ್ರಾಮ ಬರಲೇ ಇಲ್ಲ. ಪುಟ್ಟಕ್ಕ ಮನೆ ಆಚೆ ನಿಂತು ಹೋಗಿ ಬರುವವರನ್ನೆಲ್ಲ ಏನಪ್ಪಾ ನನ್ ಮಗನ ನೋಡಿದ್ರಾ ಅಂತ ಕೇಳುತ್ತಿದ್ದಳು. ಕೆಲವರು ಅಯ್ಯೋ ಅವನ ಬಗ್ಗೆ ಯಾಕೆ ತಲೆ ಕೆಡಿಸ್ಕೊತಿಯ ಪುಟ್ಟವ್ವ ಎಲ್ಲೋ ಹೋಗಿರ್ತಾನೆ ಬರ್ತಾನೆ ಬಿಡು ಎಂದು ಹೋಗುತ್ತಿದ್ದರು. ಆದರೆ ತಾಯಿ ಕರಳು ಕೇಳಬೇಕಲ್ಲ. ರಾತ್ರಿಯೆಲ್ಲ ಅವನನ್ನು ಎದುರು ನೋಡುತ್ತಲೇ ಅಲ್ಲೇ ಜಗಲಿ ಮೇಲೆ ಮಲಗಿದ್ದಳು.
ಬೆಳಿಗ್ಗೆ ಯಾರೋ ಪುಟ್ಟಕ್ಕನನ್ನು "ಪುಟ್ಟಕ್ಕ..ಪುಟ್ಟಕ್ಕ ಬೇಗ ಏಳು ಟಿವಿ ಯಲ್ಲಿ ನಿನ್ ಮಗನ ತೋರಿಸ್ತಾ ಅವರೇ ಬೇಗ ಬಾ ಎಂದು ಅವರ ಮನೆಗೆ ಕರೆದೊಯ್ದರು. ಅಲ್ಲಿ ಟಿವಿಯಲ್ಲಿ ಬರುತ್ತಿದ್ದ ದೃಶ್ಯ ಕಂಡು ಪುಟ್ಟಕ್ಕ ಕುಸಿದು ಬಿದ್ದಳು. ಟಿವಿಯಲ್ಲಿ ಬರುತ್ತಿದ್ದ ವಾರ್ತೆ ಹೀಗಿತ್ತು. ನೆನ್ನೆ ರಾತ್ರಿ ನಗರದ ಹೊರಭಾಗದಲ್ಲಿರುವ ಸೋಮಪ್ಪನ ಹಳ್ಳಿ ರೈಲ್ವೆ ಸೇತುವೆಯ ಮೇಲೆ ದುಷ್ಕರ್ಮಿಗಳು ಬಾಂಬ್ ಇಟ್ಟು ಸ್ಫೋಟಿಸಲು ಸಂಚು ನಡೆಸಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಸಿದ್ರಾಮ ಎನ್ನುವ ಯುವಕ ಆ ಬಾಂಬ್ ಅನ್ನು ಗಮನಿಸಿ ಅದನ್ನು ಪಕ್ಕದಲ್ಲಿದ್ದ ಕೆರೆಗೆ ಎಸೆದು ಸಾವಿರಾರು ಮಂದಿಯ ಪ್ರಾಣ ಕಾಪಾಡಿದ್ದಾನೆ. ದುರ್ದೈವ ಎಂದರೆ ಅದೇ ವೇಳೆ ಸೇತುವೆಯಿಂದ ಆಯ ತಪ್ಪಿ ಬಿದ್ದ ಸಿದ್ರಾಮ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ಎಂದು ಹೇಳುತ್ತಿದ್ದರು.
ಪುಟ್ಟಕ್ಕನಿಗೆ ನೀರನ್ನು ಸಿಂಪಡಿಸಿ ಎಚ್ಚರಿಸಿದ ಮೇಲೆ ಕೂಡಲೇ ಆಸ್ಪತ್ರೆಗೆ ಓಡಿ ಬಂದಳು. ಸಿದ್ರಾಮ ಇನ್ನೇನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ತಿಳಿದ ಪುಟ್ಟಕ್ಕ ಸಿದ್ರಾಮನ ಬಳಿ ತೆರಳಿದಳು. ಏನ್ಲಾ ಮಗಾ ಇದು. ಇದ್ಯಾಕ್ಲ ಹಿಂಗ್ ಮಾಡ್ಬಿಟ್ಟೆ. ಎಂದು ಒಂದೇ ಸಮನೆ ಅಳುತ್ತಿದ್ದಳು. ಅವ್ವೋ ನೀನೆ ಹೇಳ್ದ್ಯಲ್ಲವ್ವ ಹೋಗ್ ಸಾಯಿ ಅಂತ. ಅದಕ್ಕೆ ರೈಲ್ ಗೆ ತಲೆ ಕೊಟ್ಟು ಸಾಯೋವ ಅಂತ ಸೇತ್ವೆ ಹತ್ರ ಹೋದೆ ಕಣವ್ವ. ಆದ್ರೆ ಅಲ್ಯಾರೋ ಬಾಂಬ್ ಇಟ್ಟಿದ್ರು ಕಣವ್ವ.....
ಸಿದ್ರಾಮನ ಉಸಿರು ನಿಂತಿತ್ತು.
ಪುಟ್ಟಕ್ಕ ಎದೆ ಬಡಿದುಕೊಂಡು ಅಳುತ್ತಿದ್ದಳು
ಪ್ರತಿಕ್ರಿಯೆ (8)