ದನುರ್ವಿದ್ಯಾಪರೀಕ್ಷೆಯಲ್ಲಿ ಯುಧಿಷ್ಟಿರ ಹೇಳಿದ್ದು ಅಂತ ಒಂದು ಬರುತ್ತೆ. ನಮ್ಮಲ್ಲಿ ಏನು ಮಹಾಭಾರತಕತೆಯಲ್ಲಿ ಕುಮಾರವ್ಯಾಸನ ಕತೆಯಲ್ಲಿ ಏನು ಬರುತ್ತೆ ಅಂದ್ರೆ ಅರ್ಜುನ ಅಲ್ಲಿ ಹೀರೋ. ದ್ರೋಣಾಚಾರ್ಯರು ನಿನಗೆ ಹಕ್ಕಿ ಕಾಣತ್ತಾ ಅಂದರೆ, ಮರ ಕಾಣತ್ತಾ ಅಂದರೆ, ಕಾಣಲ್ಲ. ಹಕ್ಕಿ ಕಾಣುತ್ತಾ? ಕಾಣಲ್ಲ. ಬರೀ ಹಕ್ಕಿ ಕಣ್ಣು ಮಾತ್ರಾ ಕಾಣತ್ತೆ ಅಂದ. ಬಾಣ ಬಿಡು ಅಂತ ಹೇಳ್ತಾನೆ. ಹಕ್ಕಿಯನ್ನ ಕೊಲ್ತಾನೆ. ಇವನು ಭಾಳ ಗುರಿಕಾರ ಅಂತ ಹೇಳ್ತಾನೆ. ಸೋ, ಧರ್ಮರಾಜನ್ನ ಕೇಳಿದಾಗ ಅವನು ಹಕ್ಕಿ ಕಾಣತ್ತೆ, ಅದರ ಕಣ್ಣು ಕಾಣತ್ತೆ, ಮರ ಕಾಣತ್ತೆ, ಹಕ್ಕಿ ಕಟ್ತಿರೋ ಗೂಡು ಕಾಣತ್ತೆ, ಹಿಂದೆ ಆಕಾಶ ಕಾಣತ್ತೆ, ನಿನ್ಕೈಲಿ ಆಗೋದಿಲ್ಲ ಹೊಡಿಯೋದಿಕ್ಕೆ , ಹೋಗು ಅಂತ. ಆದರೆ ನನಗೆ ಧರ್ಮರಾಯ ಹೀರೋ. ಯಾಕಂದ್ರೆ ಅವನು ಹಕ್ಕಿಯನ್ನು ಒಂದು ಇಡೀ ಸಂದರ್ಭದಲ್ಲಿಟ್ಟು ನೋಡ್ತಾನೆ. ಪ್ರತ್ಯೇಕಿಸೋದಿಲ್ಲ. ಪ್ರತ್ಯೇಕಿಸಿಬಿಟ್ಟರೆ ಏನಾಗತ್ತೆ ಅಂದರೆ, ಅದು ಕೇವಲ ಬಾಣದ ಗುರಿಯಾಗತ್ತೆ ಅಷ್ಟೇ. ಆಗ ಕೊಲೆ ಅಂತನ್ನೋದು ಸುಲಭ ಆಗತ್ತೆ. ಹಿಂಸೆ ಅನ್ನೋದು ಸುಲಭ ಆಗತ್ತೆ. ನೀವು ಹಕ್ಕಿಯನ್ನ ಯಾವಾಗ ಅದರ ಮರಿಗಳ ಜತೆಗೆ ನೋಡ್ತೀರೋ, ಮರದ ಜತೆಯಲ್ಲಿ ನೋಡ್ತೀರೋ, ಆಕಾಶ ನಕ್ಷತ್ರದ ಜತೆಯಲ್ಲಿ ನೋಡ್ತೀರೋ, ಅಖಂಡವಾಗಿ ಅದನ್ನ ನೋಡಿದಾಗ, ಇಡಿಯಾಗಿ ನೋಡಿದಾಗ, ಯುಧಿಷ್ಟಿರ ಹಾಗೆ ನೋಡಿದ್ರಿಂದಲೇ ಅವನ ಕಣ್ಣಲ್ಲಿ ನೀರು ತುಂಬಿತ್ತು. ನಾನು ಇದನ್ನ, ಈ ವ್ಯವಸ್ಥೆಯನ್ನ ಕೆಡಿಸೋ ಹಾಗಿಲ್ಲ. ಇದರಲ್ಲಿ ಏನೋ ಒಂದು ಹೊಂದಾಣಿಕೆ ಇದೆ, ಪರಸ್ಪರ, ಪರಸ್ಪರ ಹೊಂದಾಣಿಕೆ ಇದೆ. ಅದಕ್ಕೆ ಅವನು ಹೇಳ್ತಾನೆ, ದಯವಿಟ್ಟು ನನ್ನನ್ನು ಕ್ಷಮಿಸಿ, ನಾನು ಹಕ್ಕಿನೋಡೋದಿಕ್ಕೆ ಸಾಧ್ಯ ಆಗ್ತಾ ಇಲ್ಲ. ಅಂದ್ರೇ ಹೀಗೆ ನೋಡೋದು ಇದೆಯಲ್ಲ, ಇವತ್ತು ಗಾಂಧಿಗೆ ಹತ್ರ ಬರೋ ಪಾತ್ರ ಯುಧಿಷ್ಟಿರ ಹೊರತು ಅರ್ಜುನ ಅಲ್ಲ.ಅರ್ಜುನ ನನ್ನ, ಯಾವತ್ತೂ ನನ್ನ ನಾಯಕನಾಗಿಲ್ಲ.
ಸಂಪದ ಪಾಡ್ಕಾಸ್ಟ್ ನಲ್ಲಿರುವ ಶ್ರೀ ಎಚ್. ಎಸ್. ವೆಂಕಟೇಶಮೂರ್ತಿಯವರ ಸಂದರ್ಶನದಿಂದ ಆಯ್ದ ಭಾಗ.
ಪ್ರತಿಕ್ರಿಯೆ (1)