ನಿನಗಿದೋ ವಂದನೆ
ಬಾಲ್ಯದಲ್ಲಿ ಒಡನಾಡಿಯಾಗಿ
ಪ್ರೀತಿಯಲ್ಲಿ ಸಿಹಿಯಾಗಿ
ಆಟದಲ್ಲಿ ಸಖಿಯಾಗಿ
ಜಗಳದಲ್ಲಿ ಜಿಗಿದಾಡಿ
ಪ್ರೀತಿಯ ನುಡಿಗಳನ್ನಾಡುತ
ಪ್ರೋತ್ಸಾಹಿಸುವ "ಸೋದರಿ"
ನಿನಗಿದೋ ವಂದನೆ
ನಗುವಿನಲ್ಲಿ ನಗುವಾಗಿ
ಅಳುವಿನಲ್ಲಿ ಅಳುವಾಗಿ
ಉಸಿರಿಗೆ ಉಸಿರಾಗಿ
ಕೈ ಹಿಡಿದು ಜೊತೆಯಾಗಿ
ಬಾಳಿನಲ್ಲಿ ಹಿತವಾಗಿ
ನಡೆಯುವ "ಮಡದಿ"
ನಿನಗಿದೋ ವಂದನೆ
ಒಂಬತ್ತು ತಿಂಗಳು ಹೊತ್ತು
ನೋವಿನಲ್ಲಿ ನೊಂದು
ನೂರೆಂಟು ಕನಸುಗಳ ಕಟ್ಟಿ
ಪುಟ್ಟ ತುಟಿಗಳ ಕಿರುನಗೆಗಾಗಿ ಕಾಯುತ
ಮರುಜನ್ಮವನೆತ್ತುವ ಮಮತೆಯ "ತಾಯಿ"
ನಿನಗಿದೋ ನಮನ
ಗಂಡಿಗೆ ಸರಿಸಾಟಿಯಾಗಿ
ಓದಿನಲ್ಲಿ ಮುಂದಾಗಿ
ಉತ್ಸಾಹದ ಚಿಲು
ಗುರಿಮುಟ್ಟುವ ಚಲವದಿಯಾಗಿ
ಸ್ಪರ್ಧಾತ್ಮಕ
ಮುದ್ದಿನ ಮಡದಿ, ಅಕ್ಕರೆಯ ಸೋದರಿ
ಪ್ರೀತಿಯ ಸೊಸೆ, ಮಮೆಥೆಯ ತಾಯಿ
ಸಹನಾಮೂರ್ತಿ, ಕ್ಷಮಯಾಧರಿತ್ರಿ
ನೋವು ತ್ಯಾಗಗಳೆಂದು ಶಾಶ್ವತವಗಿದ್ದರು
ಹಿಗ್ಗಿನಲ್ಲಿ ಹಿಗ್ಗಿ ಕುಗ್ಗಿನಲಿ ಕುಗ್ಗಿ
ಹುಟ್ಟಿದ ಮನೆಯ ಮೆಟ್ಟಿದ ಮನೆಯ ಹೆಮ್ಮೆ
ಒಲುಮೆಯ ಚಿಲುಮೆ "ಹೆಣ್ಣೇ"
ತನುಜಾಶರತ್ ಚಂದ್ರ
ಪ್ರತಿಕ್ರಿಯೆ (2)