ಕುಳಿತುಕೊಳ್ಳಿ ಬೆಚ್ಚಗೆ ಕಂದಮ್ಮಗಳಿರಾ

ಭಯಪಡದಿರಿ ನಾನಿರುವತನಕ,

ನನ್ನ ರೆಕ್ಕಗಳಿಗೆ ಶಕ್ತಿ ಇರುವತನಕ

ನನ್ನ ದೇಹದಿ ಪ್ರಾಣವಿರುವತನಕ

ಬೆಳಕು ಮೂಡಿದೆ  ಹೋಗಬೇಕಿದೆ

ತರಬೇಕಿದೆ ನಿಮಗೆ ಗುಟುಕುಆಹಾರ

ಕುಳಿತುಕೊಳ್ಳಿ ಇಲ್ಲೇ ಮರೆಯಲ್ಲಿ

ಬರುವೆ ಬೇಗನೆ ಕಾಯಿರಿ

ಬರಲಿವೆ ದಿನಗಳು ಕಾಯುತ್ತಲಿರಿ

ಪಡೆಯುವಿರಿ ನೀವು ಸಹ ರೆಕ್ಕೆಗಳಿಗೆ ತ್ರಾಣ

ಹಾರುವಿರಿ ದಿಗಂತದಿ ನಿಮ್ಮಿಷ್ಟದಂತೆ

ನಲಿಯುವಿರಿ ಎಲ್ಲಡೆ ಮನಬಂದಂತೆ

                                                                           ಚಿತ್ರಕೃಪೆ: ಅಂತರ್ ಜಾಲ