ಮನದ ಮುದ್ರಿಕೆ ತೆರೆದು
ಬಿತ್ತರಿಸಲನುಗೊಳ್ಳುವಾಗ
ಕಾದಿತೊಂದು ಇರುಳು
ಅರಿವಾಯಿತೆನ್ನ ಮರುಳು..
ಇವೆಯಂತೆ ಇವಕೆ ಮಜಲುಗಳನೆಕ
ಕಂಡಂತೆ ಕಾಣದಂತೆ ಮಗ್ಗುಲು ಒಂದೇ ಏಕ
ಇದ ಮುಷ್ಟಿಯಲ್ಲಿ ಹಿಡಿಯಲು ಹಲುಬಿದರು ಹಲರು
ಪಡೆದರು ಇದ ತಿಳಿದವರು ತಿರುಳು.
ಹಲರೆಂದರು ಭಾವಕೆ ಒಂದೇ ಬಣ್ಣ
ಮತ್ತೆಂದರು ಬಳಿಯಿರಿ ಹಲವು ಬಣ್ಣ
ಕಾಣುವ ಕಣ್ಣು ಬಲ್ಲದು ಈ ಗುಣ
ಬರಿದೆ ಹೇಳದೆ ಇದ ಕಾಣ
..........ಕಾರ್ತಿಕ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!