ತೀರ ಯಾನಕೆ ಹಲುಬಿದೆ ತೆರೆ
ಮೈಯಲಿ ತುಂಬಿ
ಸುಖ ದುಃಖಗಳ ಭಾವನೆಯ
ನೀಲ ಬಿಳುಪಿನ ನೊರೆ
ತೆರೆಗೋ ತನ್ನೊಳಗಿನ
ನೋವ , ಸಿಟ್ಟು ಹತಾಶೆಗಳ
ಹೊರ ಹಾಕುವ ತವಕ
ಇವೆಲ್ಲ ಬಂಡೆಗಳಂತೆ ಎಂದಿಗೂ ವಿಮುಖ
ಬಂಡೆಗೋ , ತನ್ನವರ ತಬ್ಬಿಕೊಳ್ಳುವ
ಎದೆಗೊತ್ತಿ, ಕಷ್ಟಗಳ ಹೇಳಿಕೊಳ್ಳುವಾಸೆ
ತೆರೆ ದೂಕಿ , ಕಲ್ಲು ಬಂಡೆಗಳ
ದಡದಿಂದ ಹೊರಹಾಕುವಾಸೆ
ಮರಳು ತನ್ನನು ತಾ ಪ್ರತಿ ನಿಮಿಷ ತೊಳೆದು
ಹೊಳೆದು ತೆರೆಗಳೊಂದಿಗೆ ಬೆರೆದು
ಬಂಡೆಗಳಡಿಯಲ್ಲಿ ಧ್ಯಾನವ ಹೊದೆದು
ಇಡಿಯ ಕಡಲನ್ನೇ ವಿಸ್ಮಯ ಮೆರೆದು
ಕಡಲು ವಿಸ್ಮಯದ ಒಡಲು
ಮನದ ಸ್ಥಿತಿಯ ಧ್ಯಾನಸ್ಥ ಮಡಿಲು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!