ತೆರೆದು ನೋಡು ನಿನ್ನ ಮೊಬೈಲ್ ಹೃದಯವ

ಕಳಿಸಿರುವೆ ನನ್ನ ಮೊಬೈಲ್ ಹೃದಯದಿಂದ ಸಂದೇಶವನನ್ನ

ಪ್ರೀತಿಯ ನಿವೇದಿಸಲು ಬಳಸಿಲ್ಲ ನಾನ್ಯಾವುದೇ ಪೇಪರನ್ನು

ತಿಳಿಯಿತೆ ನಿನಗೆ ನಾನೆಷ್ಟು ಪರಿಸರ ಪ್ರೇಮಿಯೆಂದು

 

ಕಳಿಸಿರುವೆ ನಿನಗೊಂದು ಮುಳ್ಳಿರದ ಗುಲಾಬಿಯ ಚಿತ್ರವೊಂದ

ತಿಳಿಯಿತ ನಿನಗೆ ನನಗೆಷ್ಟು ಕಾಳಜಿ ನಿನ್ನ ಮೇಲೆಂದು

ಇಷ್ಟು ದಿನ ಬಳಸುತ್ತಿರಲಿಲ್ಲ ನಾನು ಮೊಬೈಲನ್ನು

ನಿನಗಾಗಿ ಬಳಸುತ್ತಿರುವೆ ನಾನು ಬಿಟ್ಟಿರದೆ ಕ್ಷಣವೊಂದನ್ನು

 

ನನ್ನ ಸಂದೇಶವ ನೋಡಿ ನಿನಗೆ ಒಪ್ಪಿಗೆಯಾದರೆ

ನೀನೇನು ಕಳಿಸಬೇಡ ಮರು ಸಂದೇಶವೊಂದನ್ನು

ಕೊಟ್ಟುಬಿಡು ಒಂದೇ ಒಂದು, ಒಂದು ಮಿಸ್ಡ್ ಕಾಲನ್ನು

ನಿನಗಾಗಿ ಹಾಕಿಸಿರುವೆ ನಾನು ಲೋಕಲ್ ಟು ಲೋಕಲ್ ಫ್ರೀ...