ಬಾರ್ಗೇಟಿನಲಿ ಟೈಟಾಗಿ ಬಂದವರ ಕಾಪಾಡೋ ಎಣ್ಣೆಶ್ವರ

ಹೊಟ್ಟೆಲಿ ಎಣ್ಣೆ ಫುಲ್ಲಾಗಿ ಆಡುತಿದೆ ಏನ್ಮಾಡ್ಲಿ ಮಾಡ್ಲಿ ಎಣ್ಣೆಶ್ವರ

ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ತೂರಾಡು ಆಡು ಆಡು ಆಡು ಅಂತಾನೆ

ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ ಕುಡಿಬೇಡ ಬೇಡ ಬೇಡ ಅಂತಾನೆ..

ಕುಡಿದೆ ಇರೋದು ಉಂಟೆ ಎಣ್ಣೆಶ್ವರ...ಬಿಟ್ಬಿಟ್ಟು ಏನ್ಮಾಡ್ಲಿ ಒಂದೇ ಸಲ

ತನ ಡೂನ ಡೂನ ಡೂನ ಡೂನ ಡೂನ ಡೂಡೂನ

ತನ ಡೂನ ಡೂನ ಡೂನ ಡೂನ ಡೂನ ಡೂಡೂನ 

 

ಒಂದೊಂದ್ಲ ಒಂದು ಎರಡೆರ್ದ್ಲ ಎರಡು ಮೂರ್ ಮೂರಲ ಮೂರು ನಾಕ್ ಪೆಗ್ಗು ಹಾಕು

ಒಹ್ ಮೈ ಗಾದ್ಜಿಲ್ಲ ವಾಟ್ ಎ ಕ್ಯಾಲ್ಕುಲೆಶನ್..

ಹೈಯೆಸ್ಟು ಎಣ್ಣೆ ಹೊಡೆದವ್ನು ಟೈಟು..ಆಮೇಲೆ ಹೋಗಿ ಮನೇಲಿ ಆಮ್ಲೆಟ್..

ಏನ್ಮಾಡ್ಲಿ ಹ್ಯಾಂಗೋವರ್ ಹೋಗ್ತಾ ಇಲ್ಲ..ಇನ್ನೇನು ಮಾಡ್ಬೇಕು ಗೊತ್ತಾಗ್ತಿಲ್ಲ..

ಟ್ಯಾಬ್ಲೆಟ್ಟು ಹಾಕ್ಕೊಂಡ್ರು ಹೋಗ್ತಾ ಇಲ್ಲ..ಮಲ್ಗಿದ್ರೆ ನಿದ್ದೇನೆ ಬರ್ತಾ ಇಲ್ಲ....

ಏ ರಾಮ ಪಿಯುಸಿಯಲ್ ಒಮ್ಮೆ ಕುಡಿದೆ...ಆಮೇಲೆ ದಿನಾಗ್ಲೂ ಕುಡ್ಯೋದು ಕಲ್ತೆ...

ಟೆನ್ಶನ್ನಿನಲ್ಲಿ ನಾನು ಕುಡೀತೀನಿ ಪರಮಾತ್ಮ...ಸಂತೋಷದಲ್ಲೂ ನಾನು ಕುಡೀತೀನಿ ಪರಮಾತ್ಮ

ನೋವಲ್ಲು ನಾನು ಕುಡೀತೀನಿ ಪರಮಾತ್ಮ..ಹೇಗಿದ್ರು ಕುಡಿದೆ ಕುಡೀತೀನಿ ಪರಮಾತ್ಮ

ಬಿಡಕ್ಕೆ ಆಗ್ತಿಲ್ಲ ಎಣ್ಣೆಶ್ವರ...ಎಣ್ಣೆನು ಇರಬಾರ್ದ ನೀರ್ ತರ...

ತನ ಡೂನ ಡೂನ ಡೂನ ಡೂನ ಡೂನ ಡೂಡೂನ

ತನ ಡೂನ ಡೂನ ಡೂನ ಡೂನ ಡೂನ ಡೂಡೂನ 

 

ಕುಡ್ಕೊಂಡು ಕುಡ್ಕೊಂಡು ಕುಡ್ಕೊಂದಿದ್ರೆ ನಿನ್ ಮೈಲಿರೋ ಬ್ಲಡ್ಡೆಲ್ಲ ಎಣ್ಣೆ ಗುರು

ಎಣ್ಣೆನ ಬಿಟ್ಬಿಟ್ಟು ಬರ್ದೇ ಇದ್ರೆ ನೀನ್ ಹೋಗ್ಬೇಕು ಡಾಕ್ಟ್ರತ್ರ ಕೇಳು ಗುರು..ಗುರು

ಬಾಳೊಂದು ಭಗವಂತ ಕೊಟ್ಟಿರುವ ಗಿಫ್ಟು..ಕುಡ್ಕೊಂಡು ಯಾಕ್ಮಾಡ್ತೀ ನೀನದನು ವೇಸ್ಟು..

ಮನೆ ಮಕ್ಳು ಎಲ್ಲ ಜವಾಬ್ದಾರಿ ನಿಂದಯ್ಯಾ...ಕುಡ್ಕೊಂಡು ಇದ್ರೆ ನೀನು ಹೆಂಗಯ್ಯ...

ಎಣ್ಣೆನ ಒಮ್ಮೆ ಬಿಟ್ಟು ನೋಡು ಪುಣ್ಯಾತ್ಮ...ಲೈಫೆಷ್ಟು ಅಂದ ಅಂತ ನಿನಗೆ ತಿಳಿಯುತ್ತೆ..

ಎಣ್ಣೆನೆ ಸರಿ ಇಲ್ಲ ಪುಣ್ಯಾತ್ಮ...ಬಿಟ್ಬಿಟ್ಟು ಒಳ್ಳೆ ಕೆಲಸ ಮಾಡು ಪುಣ್ಯಾತ್ಮ...   

ತನ ಡೂನ ಡೂನ ಡೂನ ಡೂನ ಡೂನ ಡೂಡೂನ

ತನ ಡೂನ ಡೂನ ಡೂನ ಡೂನ ಡೂನ ಡೂಡೂನ