ಕಳೆಯಿತು ಮಳೆಗಾಲ ಮಳೆ ಇಲ್ಲದೆ

ಶುರುವಾಗಿದೆ ಚಳಿಗಾಲ ತಣ್ಣನೆ ಗಾಳಿಯೊಂದಿಗೆ

ಸಂಜೆಯತಣ್ಣನೆ ಗಾಳಿಗೆ ಮೈ ಎಲ್ಲ

ನಡುಗುತಿದೆ ಚಳಿಯಲ್ಲಿ...

 

ಈ ತಣ್ಣನೆಯಚಳಿಯಲ್ಲಿ ನಿನ್ನಯ

ಸನಿಹ ಕೋರುತಿದೆನನ್ನೀ ಮನಸು 

ನೀ ನೀಡುವ ಬೆಚ್ಚನೆಯ ಸ್ಪರ್ಶಕೆ 

ಹಾತೊರೆಯುತಿದೆಮನಸು..

 

ಮೃದುವಾದ ನಿನ್ನ ತೋಳ್ಗಳಲ್ಲಿ

ನನ್ನ ಕೈಗಳನ್ನು ಸೇರಿಸಿ ಒಮ್ಮೆ

ನನ್ನ ಆಲಿಂಗಿಸಿ ಬೆಚ್ಚಗಾಗಿಸು 

ಓ ನನ್ನಮೆಚ್ಚಿನ "ಸ್ವೆಟರ್ರೆ"...