ಕಣ್ಣಂಚಿನ ಪ್ರೇಮವೆಂಬುದೇ ಹಾಗೆ
ಹುಚ್ಚು ಮಳೆಯಾರ್ಭಟಕೆ ಕೊಚ್ಚಿಹೋದ ತೆನೆಯಂತೆ
ನಿನ್ನ ಕಣ್ಣುಗಳೇನೋ ನುಡಿದು
ನನ್ನ ಹೃದಯವ ಮಿಡಿಸಿದಂತೆ
ಗಾವಳಿಗನ ಕೊಳಲ ಕರೆಗೆ
ಹಿಂಬರಿದ ಎಳೆಗರುವಿನಂತೆ
ನಿನ್ನ ಮಾತಿನ ಮೋಡಿಗೆ
ನನ್ನೇ ಮರೆತೆ ಶಬರಿಯಂತೆ
ಮತ್ತೆ ಮೂಡಿದ ಪೂರ್ಣ ಚಂದಿರ
ನೀನಾದೆ ಈ ನನ್ನ ಕಾರ್ಗತ್ತಲ ಬಾಳಿಗೆ
ನಲ್ಲ, ಕರೆದೊಯ್ಯುವೆಯಾ ನನ್ನ
ಗ್ರಹಣವಾಗದ ಆ ನಿನ್ನ ಲೋಕಕೆ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)