ಅಡವಿಯ ನಡುವಲಿ ಅಡಗಿಹ ಸುರಗಿಯ ಸುಮವದು ಪಸರಿಪ ಘಮಲಿನಲಿ.

ಹೊಂಗೆಯ ನೆರಳಿನ ತಂಪಲ್ಲಿ,
ಕೋಗಿಲೆ ಗಾನದ ಗುಂಗಿನ ಇಂಪಲಿ
ನಿದಿರೆಯ ಜೊಂಪಿನ ಅಮಲಿನಲಿ.

ಕಾಡಿನ ತೊರೆಯಲಿ,
ಕುಳಿರ್ ಗಾಳಿಯ ತಂಪಲ್ಲಿ,
ಮೈಮನ ಮರೆಯುವ ವನಸಿರಿ ಎದುರಿನಲಿ,

ನರನಾಡಿಗೆ ಚೈತನ್ಯವ ತುಂಬುತಲಿ.
ತರುಲತೆಗಳು ಹಾಡಿವೆ ಮುದ ನೀಡುತಲಿ
ಬದುಕಾಗಿದೆ ಸಾರ್ಥಕ ನಿಮಿಷದಲಿ