ನಾನು
ಬರೆದ
ಕವಿತೆಯ
ಸಾಲುಗಳಲಿ
ಇಣುಕಿ
ಅರ್ಥ
ಹುಡುಕಿ
ನಕ್ಕು,
ಸಂಭ್ರಮಿಸಿದ
ಹುಡುಗಿ
ನನ್ನೆದೆಯ
ಆಳಕ್ಕೇಕೆ
ಇಳಿಯದೇ ಹೋದೆ?……………..

ನನ್ನ
ಅದೆಷ್ಟೋ
ಕನಸುಗಳನ್ನ
ನಾನೇ
ನನ್ನ
ಕೈಯಾರೆ
ಕೊಲ್ಲುತ್ತೇನೆ:
ಇಲ್ಲಿ
ಕವಿತೆಗಳಿಗೆ
ಪ್ರಸವವಾಗುತ್ತದೆ.
ನೀನು
ಎಂದಿನಂತೆ
ಮೆಚ್ಚಿ,
ಸಂಬ್ರಮಿಸುತ್ತಿ…………

ನೀಲಿ
ಕಡಲಾಳದಲ್ಲಿ
ಜಾರಿ ಹೋದ
ಹುಡುಗಿ,
ಈ
ಸಾಲುಗಳಲಿ
ಮಿಂದೆದ್ದಿಯಲ್ಲೆ………….

ನೋಡು
ನೀನಿಲ್ಲದ
ಈ
ರಾತ್ರಿ
ಕೂಡ
ಸುಸ್ತಾಗಿ
ಸತ್ತು
ಮಲಗಿದೆ………….
++++++++++++

ಒಮ್ಮೊಮ್ಮೆ
ನಿನ್ನ
ನೂರಾರು
ಮಾತುಗಳಲಿ
ಒಂದೂ
ತಿಳಿಯುವುದಿಲ್ಲ:
ನಿನ್ನ
ಕ್ಷಣದ
ಮೌನಕೆ
ಅರ್ಥ
ಹುಡುಕಹೋಗಿ
ಪ್ರತಿಬಾರಿ
ಸೋಲುತ್ತೇನೆ……………

ನೀನೆಂದರೆ……….
ಛೇ,
ಹಾಳಾದ್ದು
ಈ
ಮೆಟಾಫರ‍್ಗಳ
ಸಹವಾಸವೇ
ಬೇಡ!