ಹಾಗೆಯೇ
ಬಿಟ್ಟುಬಿಡು,
ಕನಸಲ್ಲಾದರೂ
ಗಮ್ಯ
ಸೇರುತ್ತೇನೆ..........
+++++++++++
ಕಣ್ಣೀರು
ಹಿಡಿದಿಟ್ಟುಕೊಳ್ಳಲಾಗದಂತೆ
ಹಾಗೆಯೇ
ಇಳಿದು
ಹೋಗುತ್ತದೆ,
ನೆನಪುಗಳು
ಮಾತ್ರ
ಎದೆಯೊಳಗೆ
ಬೆಚ್ಚಗಿವೆ
ಬಯಸಿಯೂ
ಮಾಸಿಹೋಗದಂತೆ............
+++++++++++++++++++++++
ಅವಳೊಲವ
ಬಯಸಿದೆ
ಆಕೆಯೇ
ದೊರೆತಳು
ಪ್ರೀತಿ
ಇನ್ನೂ
ಮರಿಚೀಕೆ.........
++++++++++++
ನೀ
ಸಿಗದ
ನೋವು
ಹತಾಶೆಯನ್ನೆಲ್ಲಾ
ವಿಸ್ಕಿಯ
ಬಾಟೆಲ್ಲು
ಮರೆಸಿತ್ತೆಂದರೆ
ನೀ
ಮುನಿಸಿಕೊಳ್ಳುತ್ತೀಯಾ.......
+++++++++++++++
ಅಪ್ಪನ
ಚಿತೆಗೆ
ಕೊಳ್ಳಿ
ಇಟ್ಟಾಗಿತ್ತು
ಎದೆಯಲ್ಲಿ
ಈಗಲೂ
ಉರಿಯುತ್ತಿರುವುದು
ಅವಳಿಟ್ಟ
ಬೆಂಕಿ
ನಿಜಕ್ಕೂ
ಒಲವೇ
ವಿಸ್ಮಯ................
++++++++++++++
ನನ್ನ
ಕವಿತೆಗಳನ್ನೆಲ್ಲಾ
ಕೇಳಿ
ನಕ್ಕು
ಸಂಭ್ರಮಿಸುತ್ತಿರುವ
ನಿನಗೆ
ನನ್ನ
ಪ್ರೇಮ
ವೈಫಲ್ಯದ
ಅರಿವಿರಲಿಕ್ಕಿಲ್ಲ........
+++++++++++
ಹಗಲೆಲ್ಲಾ
ಜಗತ್ತು
ಬೆಳಗಿಸುವ
ಸುಡುವ
ಸೂರ್ಯ
ಸಂಜೆಯಾಗುತ್ತಲೇ
ಕಡಲ
ಒಡಲೊಳಗೆ
ಕಳೆದು
ಹೋಗುತ್ತಾನೆ,
ಪ್ರೀತಿಗೆ
ಅದೆಂತಹ
ಶಕ್ತಿ (ಸೆಳೆತ)!........
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!