ಅಪ್ಪ ಅಮ್ಮನೊಡನೆ ಇಂದು

  ಮಾತಾನಾಡಬಹುದು.ನೋವುಗಳ ....

  ತುಂಬಿಟ್ಟುಕೊಂಡ  ಮನಸ್ಸು....

    ಅಮ್ಮನ  ಸೆರಗಿನ ಕೊನೆ .... ಕಣ್ಣೀರಿನಿಂದ ಒದ್ದೆ..!

 

     ಮಗಳ ನೋಡಲು ಹೋದವಗೆ...

    ಅವಳ ಬಾಡಿದ ಮುಖದಲ್ಲೊಂದು

   ಹೇಳಲಾರದ  ಪ್ರಶ್ನೆ   ಇಣುಕಿದಂತೆ......

   " ಅಪ್ಪಾ  ನಾನು ನಿನಗೆ ಹೊರೆಯೇ ?"

  

     ಪ್ರತಿ ತಿಂಗಳ ಮೊದಲ ಶನಿವಾರ ಬಂತೆಂದರೆ

     ವಸತಿ ನಿಲಯದಲ್ಲಿ ಹೀಗೆಯೇ.........