ಹಡೆದವ್ವನ
ಕಡಿದೆನೆಂಬ
ಪಾಪಪ್ರಜ್ಞೆ
ಈಗಲೂ
ಕಾಡುತ್ತಿತ್ತು:
ರುದಿರ
ಕುಡಿದ
ಕೊಡಲಿ
ಮಾತ್ರ
ಮೌನದಿ
ಕಟ್ಟಿಗೆ
ಒಡೆಯುತ್ತಿತ್ತು:
ಕಲೆ
ಮಾಸಿಲ್ಲವೆಂಬ
ಶಂಕೆ
ನನಗೆ.........
+++++++++++++++

ಬದುಕಲು
ಕಲಿಯಿರಿ
ಎಂದು
ಭೋದಿಸಿದವನ
ಸಾವು
ಸಹಜವಲ್ಲ
ಆತ್ಮಹತ್ಯೆಯಂತೆ...........
++++++++++++++++

ಒಳ್ಳೆಯ
ಪಾಠದ
ಹಿಂದೆ
ಕೆಟ್ಟ
ಅನುಭವ
ಮಗುಮ್ಮಾಗಿ
ನಿಂತಿದೆ..............
++++++++++
ಹಾಡಲಾಗದ
ಕೋಗಿಲೆ
ಕುಣಿಯಲಾಗದ
ನವಿಲು
ಈಗ
ಮತ್ತೆ
ಗೆಳೆಯರಂತೆ............