ಕಣ್ಣುಗಳಲಿ ಕೂಡಿದೆ ನೀನು

ಕನಸುಗಳಲಿ ಆಡಿದೆ ನೀನು


ಮನಸುಗಳಲಿ ಬಿಗಿದಪ್ಪಿದೆ

ಆಸೆಗಳಲಿ ಹುಚ್ಚು ಮಾಡಿದೆ ನೀನು


ತುಟಿ ಬಿಚ್ಚಿ ಮಾತನಾಡದೆ

ತುಟಿ ಒತ್ತಿ ಮಧುವ ನೀಡಿದೆ ನೀನು


ಹೃದಯದ ಪಾತ್ರೆಯ ಇನಿದು ಮಾಡಿದೆ `ಪ್ರಬಿ 'ಯು

ಕನಸೊಡೆದೆದ್ದಾಗ  ಯಾಕೆ ಓಡಿದೆ ನೀನು