ಭಾನೆಂಬ ಇರುಳೊಡಲಿಗೆ
ಒಂಟಿ ಕಣ್ಣಿನೊಡೆಯ
*
ಚಂದಿರ ನೀ ಎಶ್ಟೊಂದು
ಸುಂದರ!
ಭಾನೆಂಬ ಭಾಶೆಯ ಬರಹದಲಿ
ನೀನೇ ಅರದ್ ವಿರಾಮ,
ನೀನೇ ಪೂರಣ ವಿರಾಮ.
*
ಮುಗಿಲ ತೋಟದಿ
ಮೊಗ್ಗುಗಳವೆಶ್ಟೋ?
ಮಲ್ಲೆಯಾಗಿ
ಅರಳಿ ನಿಂತಿರುವ ಹೂವದದೊಂದೆ!
*
ಪದಗಳಲಿ ಚಂದ್ರನ
ಕೊರೆಯಲು ಹೊರಟೆ
ಚಂದ್ರನ ಚೂರುಗಳವು
ರಂಗೋಲಿಯ ಚುಕ್ಕೆಗಳಾಗಿ
ಅರಳಿ ಚೆಲುವು ಬೀರಿದವು
ಅದಕೆ ಪದಗಳವು ಬೆರಗಾಗಿ ನಾಚಿ!
ನೀರಾದವು.
ಪ್ರತಿಕ್ರಿಯೆ (1)