ಕಣ್ಣ ರೆಪ್ಪೆ ಚುಂಬಿಸುತಿಲ್ಲ ನಿನ್ನೊಲವಿಲ್ಲದೆ ಸಾಕಿ
ಮನವು ಮಲಗುತಿಲ್ಲ ನಿನ್ನೊಲವಿಲ್ಲದೆ ಸಾಕಿ
ಮಧುಪಾತ್ರೆಯಂತಿದ್ದ ಕಣ್ಣಿಗೆ ಮಧುವಿಲ್ಲ
ಕನಸು ಕೊರಗಿ ಕರಗುತಿದೆ ನಿನ್ನೊಲವ ಬಲವಿಲ್ಲದೆ ಸಾಕಿ
ಮಾತು ತಡಕಾಡಿ ಮೌನವ ಹಿಡಿಯಿತು
ಮೌನ ಮಿಸುಕಾಡಿತು ನಿನ್ನೆಸರ ಉಸಿರಿಲ್ಲದೆ ಸಾಕಿ
ಊಟ ಸೇರದಾಯಿತು ; ನೋಟ ನೋಡದಾಯಿತು
ನಿನ್ನ ನೆನಪು ನೆರಳಾಗಿ ಮೂಡುತಿಹುದು ದಣಿವಿಲ್ಲದೆ ಸಾಕಿ
`ಪ್ರಕಾಶ'ನ ಮನಸ ಹುಚ್ಚಾಯಿತು ಕನಸೆ ಹೆಚ್ಚಿ ಹೋಯಿತು
ಹೃದಯ ಮಿಡಿದಾಗಲೆಲ್ಲ ನನ್ನೂಸಿರಲ್ಲಿ ನಿನ್ನೆಸರ ಚೆಲ್ಲಿದೆ ಸಾಕಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!