ಮುಂಗುರುಳ ತೀಡುವ
ತಂಪಾದ ಗಾಳಿಯಾಗಿ
ಕಿವಿಯಲ್ಲಿ ಗುಂಯ್ಗುಡುವ
ಇಂಪಾದ ಹಾಡಾಗಿ
ಕೆಂಪಾದ ಕೆನ್ನೆಯ ರಂಗನ್ನು
ಮತ್ತಷ್ಟು ಹೆಚ್ಚಿಸಿ
ಭಾವನೆಗಳಲ್ಲಿ ಮುಳುಗಿದ
ಮನವನ್ನು ಬೆಚ್ಚಿಸಿ
ನೀ ನನ್ನಿಂದ ದೂರವಾದದ್ದೇಕೆ?
ದೂರದಲ್ಲಿ ಕಾಣುವ
ನುಣುಪಾದ ಚಂದಿರನಂತೆ
ಮನವನ್ನು ಮೋಹಿಸುವ
ಚಿಗುರಿದ ಹಸಿರಿನಂತೆ
ಬಾಳಲ್ಲಿ ಮೂಡಿದ
ಚೈತ್ರದ ಶೃಂಗಾರವಾದ ನೀನು
ನವ ಕುಸುಮಗಳ
ಸೌಗಂಧ ಚೆಲ್ಲಿದ ನೀನು
ನನ್ನಿಂದ ದೂರವಾದದ್ದೇಕೆ?
ಜೀವಜಲವಿಲ್ಲದ
ಜಲಚರದಂತಾಗಿಸಿ
ಬಿಡಿಸಲಾಗದ
ಬಂಧದಲಿ ಬಂಧಿಸಿ
ನೀನಿರದಿರಲಾರೆನೆಂಬ
ಭಾವನೆಯ ಬಿತ್ತಿಸಿ
ಬದುಕಿತೋರಿಸು
ನೀನೆಂಬ ಹಠದಿಂದ
ಮುಗ್ಧ ಮನಸಿಗೆ
ಬರೆಯನ್ನು ಎಳೆದು
ನೀ ನನ್ನಿಂದ ದೂರವಾದದ್ದೇಕೆ?
- ಉಷಾ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)