ಮುಂಜಾವಿನ ಕೋಳಿ ಕೂಗಿಗೆ ಭಂಗಗೊಂಡ
ನಿದ್ರಾದೇವಿ ನನ್ನ ಬಿಟ್ಟು ಹೊರಟು ಹೋಗಿದ್ದಳು
ಕಣ್ಣರಳಿಸಿ ಆಚೆ ಬಂದು ನೋಡಲು
ನಾನೆಲ್ಲಿರುವೆನೆಂದು ಅರಿಯದಾದೆನು.
ಬಾನು ಬುವಿ ಒಂದಾದಂತೆ ಭಾಸವಾಗುತ್ತಿತ್ತು
ಎಲ್ಲಿ ನೋಡಿದರು ಬೆಳ್ಳನೆ ಮಂಜು ಮಂಜು..
.ಇದು ಧರೆಯ ಇಲ್ಲ ಸ್ವರ್ಗವ ಎಂಬ
ಗೊಂದಲಮನೆ ಮಾಡಿತ್ತು ಮನದಲ್ಲಿ...
ತರುಲತೆಗಳು ಜಳಕ ಮಾಡಿದ್ದವು ಮಂಜಿನಲ್ಲಿ
ಮುತ್ತಿನಂತೆ ಪೋಣಿಸಿಟ್ಟ ಮಂಜಿನ ಹನಿಗಳ
ನೋಡುತ್ತಾ ಪುಳಕಗೊಂಡಿತು ಮನವು
ಝುಮ್ಮೆಂದಿತು ಮೈ ಹನಿಯೊಂದು ಮೈಮೇಲೆ ಬಿದ್ದಾಗ
ಪ್ರಕೃತಿ ಮಾತೆಯ ಆ ಸೌಂದರ್ಯ ಕಂಡು
ಕುಣಿದಾಡುತ್ತಿದ್ದರೂ ನನ್ನ ಈ ಮನಸು
ಕೊರಗೊಂದು ಕಾಡುತ್ತಿತ್ತು ಮನದಲ್ಲಿ
ನೀನಿಲ್ಲವಲ್ಲ ಸಂಗಡ ಗೆಳತಿ ಜೊತೆಯಲ್ಲಿ.
ಚಿತ್ರ ಃ ಸ್ವ೦ತದ್ದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!