ದಿನಾ ಅಮ್ಮ ಮಾಡಿಟ್ಟ ಅದೇ 'ಉಪ್ಪಿಟ್ಟು' ತಿಂದು ಬೇಸರಗೊಂಡಿದ್ದ ರವಿ ಈ ದಿನ ಪೇಟೆ ತಿಂಡಿ ತಿನ್ನಬೇಕೆಂದುಕೊಂಡ,
ಅದ್ಯಾವುದೋ ಹೋಟೆಲ್ ಗೆ ನುಗ್ಗಿ ಯಾವ ತಿಂಡಿ ಕೇಳಬೇಕೆಂದರಿಯದೆ ಟೇಬಲ್ ಮೇಲಿದ್ದ ಚೀಟಿ ಮೇಲೆ ಪಕ್ಕದವನಂತೆ ತಾನೂ ಗುರುತು ಮಾಡಿಬಿಟ್ಟ,
ಕ್ಷಣದಲ್ಲೇ ಬಿಸಿ 'ಉಪ್ಪಿಟ್ಟು' ಅವನ ಎದುರಿತ್ತು , ಹೇಗೋ ಸುದಾರಿಸಿ ತಿಂದು ಇನ್ನೇನಾದರು ಬೇರೆ ತಿನ್ನಬೇಕೆಂದುಕೊಂಡು ಪಕ್ಕದವನನ್ನೇ ಗಮನಿಸಿದ,
ಆತ once more ಅಂದ ಈತನೂ ಹಾಗೇ ಅಂದ, ಈಗ ರವಿಯ ಮುಂದಿತ್ತು ಮತ್ತದೇ 'ಉಪ್ಪಿಟ್ಟು'
ರೋಹಿತ್.ಪಿ.ವಿಟ್ಲ
ಪ್ರತಿಕ್ರಿಯೆ (2)