ಸ್ವಾತಂತ್ರ್ಯ ಸಿಕ್ಕಿತು ಸ್ವತಂತ್ರರಾಗಲಿಲ್ಲ ಮತ್ತೆ ಬಾ ಗಾಂಧಿ...

ಅಹಿಂಸೆ ಕಂಡಿತು ಸಿಗಲಿಲ್ಲ ಮತ್ತೆ ಬಾ ಗಾಂಧಿ...

 

ಮೂತಿ೯ಗಳು ನಿಂತವು ವಿಚಾರಗಳ ತಿಳಿಯಲಾಗಲಿಲ್ಲ

ಆಚರಣೆಗಳು ನಡೆದವು ಮೌಡ್ಯ ದೂರವಾಗಲಿಲ್ಲ ಮತ್ತೆ ಬಾ ಗಾಂಧಿ...

 

ಮನುಜ ಮತದ ಮಾನವೀಯತೆ ಮರೆತು ಹೊಗುತಿದೆ

ಮಾನವೀಯತೆಯ ಮರುಸ್ಥಾಪಿಸಲಾಗಲಿಲ್ಲ  ಮತ್ತೆ ಬಾ ಗಾಂಧಿ...

 

ದೇಶದ ಐಕ್ಯತೆಯಲಿ  ಒಂದಾಗಿರುವ ನಾವು ಕಿತ್ತಾಡುತಿಹೆವು

ಬಾಶೆ ನಕಾಶೆಗಳ ವ್ಯಾಜ್ಯವ  ಬಗೆಹರಿಸಿಕೊಳ್ಲಗಲಿಲ್ಲ  ಮತ್ತೆ ಬಾ ಗಾಂಧಿ...

 

ರಾಮ ರಾಜ್ಯದ ಕನಸ ಕಂಡ ಕಣ್ಣುಗಳಲಿ

ರಾವಣರ ಮನಸ ಪರಿವತಿ೯ಸಲಾಗಲಿಲ್ಲ ಮತ್ತೆ ಬಾ ಗಾಂಧಿ...