ಮೂಡುವ ಕೃತಿಯಿದೆ
ಕುಂಚವಿಲ್ಲ
ಆಡುವ ಬಾಯಿದೆ
ದನಿಯಿಲ್ಲ
ನೊಡುವ ಕಣ್ಣಿದೆ
ಆಸೆಯಿಲ್ಲ
ಕನವರಿಸುವ ಕನಸಿದೆ
ಬಣ್ಣವಿಲ್ಲ
ಬಡಿಯುವ ಹೃದಯವಿದೆ
ಮಿಡಿತವಿಲ್ಲ
ತುಂಬಿದ ಮನಸಿದೆ
ಭಾವವಿಲ್ಲ
ಜಡ ದೇಹವಿದೆ
ಉಸಿರಿಲ್ಲ
ನಲ್ಲ,
ಏಕಾಂತ ಜೊತೆಗಿದೆ
ನೀನಲ್ಲ!
- ಉಷಾ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)