ವರುಷ ತುಂಬಿದೆ ಗೆಳತಿ ನಮ್ಮಿಬ್ಬರ ಭೇಟಿಗೆ
ಹೊಸವರುಷದ ಸಂಭ್ರಮವಿರಲಿಲ್ಲ ಎನಗೆ ಅಂದು
ಬದಲಿಗೆ ಹೊಸ ಜೀವನದ ಸಂಭ್ರಮವಿತ್ತು ಅಂದು.
ನೆಲವ ನೋಡುತ ಕುಳಿತಿದ್ದೆ ನಾಚಿಕೆಯಲಿ
ನಿನ್ನ ನೋಡುತ ಕುಳಿತಿದ್ದೆ ನಾನು ನಿನ್ನೆದುರಲಿ
ನಿನ್ನ ನೋಟಕೆ ಕಾಯುತ್ತ ಕುಳಿತಿದ್ದೆ ಕಾತುರದಿ
ಮೆಲ್ಲನೆ ತಲೆಯೆತ್ತಿ ನೀ ನನ್ನ ನೋಡಿ ತುಸು ನಕ್ಕಾಗ
ನಿನ್ನ ಕಣ್ಣಂಚಲಿ ಕಂಡ ಆ ಹೊಳಪಿಗೆ ಮರುಳಾದೆ ನಾನು
ನಿನ್ನ ನಗುವನು ಕಂಡು ತನ್ಮಯನಾದೆನು ನಾನು
ಆಗಿದ್ದೆವು ಅಪರಿಚಿತರು ನಾವಿಬ್ಬರು ಅಂದು
ಆಗಿದ್ದೇವೆ ಸತಿ ಪತಿಗಳು ನಾವಿಬ್ಬರು ಇಂದು
ವರುಷ ತುಂಬಿದೆ ಗೆಳತಿ ನಮ್ಮಿಬ್ಬರ ಭೇಟಿಗೆ...ವರುಷ ತುಂಬಿದೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (10)