ಕೋಟಿ ಸೂರ್ಯರ ನಡುವೆ
ನಾನು ಒಬ್ಬ ಸೂರ್ಯ
ಹೊಳಪಿಲ್ಲ ಬಿಳುಪಿಲ್ಲ ಅಷ್ಟೇ...
ಸ್ಪಷ್ಟತೆಯ ಸುಖವಿಲ್ಲ
ಮನ್ನಣೆಯ ಮುಖವಿಲ್ಲ
ಅನುಮಾನವೇ ಮನೆಸೆಲ್ಲ...
ಕ್ರಾಂತಿಯ ಕಾವಿಲ್ಲ
ಶಾಂತಿಯ ಸುಖವಿಲ್ಲ
ಸ್ವಾತಂತ್ರದ ಬೆಲೆ ಗೊತ್ತಿಲ್ಲ
ಮೂಲದ ಅರಿವಿಲ್ಲ
ಗುರಿಯೊಂದು ಗೊತ್ತಿಲ್ಲ
ಪ್ರಸ್ತುತದ ಪ್ರಶ್ನೆಯೊಂದುಳಿದು..
ಮಾಗುವ ಸಹನೆಯಿಲ್ಲ
ಅವಸರದ ಬದುಕಲ್ಲಿ
ನಾ ಸೋತು ಹೋದೆ...
ಸೋತು ಸೋತು ಸೋತು
ಕಳೆದು ಕೊಳೆತು ಹೋದೆ
ಪ್ರತಿಕ್ರಿಯೆ (3)