ಖಾಲಿ ಖಾಲಿತನ, ಮುಖ ಮುಚ್ಹಿ ಕುಳಿತ
ಸೋತ ಸೂತಕ ಭಾವದಲ್ಲೂ, ತೂಟ್ಟ ಮುಖವಾಡ
ಕಳಚದಿರು ಕಳೆಗುಂದಿ ಕಳಗುದುರುವವರೆಗೆ,
ಎಂದೆನ್ನುವ ಹಮ್ಮಿನ ಹುಂಬ, ಆ ಕಟು ಟೀಕಾಕಾರ;
ಹುಸುಕಿನಲಿ ಹೆಜ್ಜೆಗಳನುದುಗಿಸಿದಂತೆ,
ಆದಿ, ಅತ್ಯಂತ ಸುಲಭ! , ಅತ್ಯಂವೊ ಅಂತೆ
ಅತ್ಯಂತ ಶೀಘ್ರ! ಅಸಂಬದ್ಧವಿರದ, ಪರಾಕಾಷ್ಠತೆಯ
ಉದ್ವೇಗವಿರದ, ನಿಶ್ಯಭ್ಧ ತೆರೆ ಬೀಳುವ ಹಾಗೆ;
ಸತ್ತ ಹೆಣಗಳ ನಟ್ಟನಡುವಿನಲಿ
ನರ ಸತ್ತ ಕೈ-ಕಾಲುಗಳನೆ ಧರಿಸಿ
ಎಚ್ಚತ್ತು, ಎದ್ದು ಕಾಲೂರಿ ಮೇಲೆದ್ದು ಸಮೀಪದ
ನಿಶ್ಕ್ರಮಣದ ಹಾದಿಗೆ ಓಡ ಬಲ್ಲೆಯಾದರು, ಕೇಳುವವರಾರು?
ಶಾಂತಿಯ ಕದಡಲು ಕೋಪೊದ್ರಿಕ್ತ,
ಭಯ ಮಿಶ್ರಿತ ಕೆರಳಿ ಕಾದ ಕಬ್ಬಿಣದ
ತುಣುಕಿನಂತಾರ್ಭಟಿಸುವ ಮನದಾಸೆಗಳೆಲ್ಲಾ
ನಿಧಾನವಾಗಿ ಬಿಸಿಯ ನುಂಗಿ ನಿರಾಳ;
ಸಾವಿನ ಅಂಗಿ ಕಳಚಲು ನಿರಂತರ ಬಡಿದಾಡಿದರೊ
ಬುದ್ಧಿ ಭಾವಗಳ ಅಟದ ಕುಣಿಕೆಗೆ ಸಿಗದೆ ಪಾರಾಗಲು ಪರದಾಡಿದರೊ
ನಿರಂತರ ದಾಳಿಯಿಡುವ ಬದುಕಿನ ಬಿರುಗಾಳಿಗೆ ಶರಣಾಗತಿಯದರೊ
ಬದುಕಿನೆಡೆಗೆ ಸೆಳೆಯುವ ಕಲಾವಿದನ ಕಣ್ ತಪ್ಪಿಸುವ ಹಾದಿ ಗೊತ್ತಾಗಲೇ ಇಲ್ಲ;
ಆಶ್ರಯ ತಾಣದ ತಡಕಾಟದಲ್ಲಿ ತಲ್ಲೀನ
ಹಣಕ್ಕೆ ಹಂಚುವ ಪ್ರೀತಿಯ ಪಡೆಯುವುದರಲ್ಲಿ ಮತ್ತದನೆ ಹಂಚುವುದರಲಿ ಮಗ್ನ
ಭಗ್ನಗೊಂಡ ಹ್ರುದಯದ ಚೊರುಗಳನ್ನೇ ಕ್ರೊಡೀಕರಿಸಿ ಸುತ್ತಲೊ
ಅವರಿಸಿರುವ ಖಾಲಿ ಖಾಲಿತನವನ್ನ ತುಂಬಲು ಹೊಚ್ಹ ಹೊಸ ಅಂಕಕ್ಕೆ ಮತ್ತೆ ಶುಭಾರಂಭ;
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಬುದ್ದ ನಕ್ಕಾಗ ನನ್ನೊರಿನಲ್ಲಿ ಸೊರ್ಯೋದಯ
ಅವ್ವ
ನೆಪ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!