ಕನಸಲ್ಲಿ ಕೊಸರಾಡಿವೆ ಪ್ರೀತಿ ಪದಗಳು

ಮನಸಲ್ಲಿ ಮಲ್ಲೆಯಾಗರಳಿವೆ ಪ್ರೀತಿ  ಪದಗಳು

 

ಕಣ್ಣಿಗೆ ಕಾಡಿಗೆಯಾಗಿವೆ ಪ್ರೀತಿ ಪದಗಳು

ತುಟಿಯಲ್ಲಿ ತೊಟ್ಟಿಕ್ಕುತ್ತಿವೆ ಪ್ರೀತಿ ಪದಗಳು

 

ಗುಳಿ ಕೆನ್ನೆಯ ನಗುವಲ್ಲಿ ಮುದುಡಿ ಕುತಿವೆ ಪ್ರೀತಿ ಪದಗಳು

ಹೃದಯದ ಮಿಡಿತದಲ್ಲಿ ಮಿಸುಕಾಡುತ್ತಿವೆ ಪ್ರೀತಿ ಪದಗಳು

 

ಬಳೆಯಲ್ಲಿ ಬಳುಕಾಡಿವೆ ಪ್ರೀತಿ ಪದಗಳು

ಗೆಜ್ಜೆಯಲ್ಲಿ ಸದ್ದು ಮಾಡಿವೆ ಪ್ರೀತಿ ಪದಗಳು

 

ನನ್ನುಸಿರಲ್ಲಿ ನಿನ್ನೆಸರ ಹೇಳಿವೆ ಪ್ರೀತಿ ಪದಗಳು

ನೀ ಸಿಗದಾದಾಗ ಗೋರಿಯಲ್ಲೂ   ಧ್ಯಾನಕ್ಕಿಳಿದಿವೆ ಪ್ರೀತಿ ಪದಗಳು...

                                              ಪ್ರಕಾಶ.ಬಿ.ಜಾಲಹಳಿ

 

ಚಿತ್ರ ಕೃಪೆ - kelliedayart.com