ಹಣ್ಣೆಲೆ
------------
ಮರದ ಋಣವಕಳೆದಿಂದು
ಅಳಿದಿಹುದು ಹಣ್ಣೆಲೆಯೊಂದು
ಬೀಳುತಿಹುದು ಕೊಂಬೆಯಿಂದ
ತೇಲಿ ತಾನು ಹಿಂದುಮುಂದು.
ಪವನ ಸಿದೆಗೆಯನೇರಿ ಪತ್ರೆ,
ಹೊರಟಿಹುದು ಅಂತಿಮ ಯಾತ್ರೆ.
ತೊರೆದಿಹುದು ಇಹವೆಂಬ ಜಾತ್ರೆ,
ಚಿರಶಾಂತಿಯಲಿಯದರ ಚಿರಮೌನಯಾತ್ರೆ.
ಹೊಬಿಸಿಲ, ತಣ್ಬೆಳಗ ಮೃದುಕಿರ್‍ಅಣ ಜೊತೆಗಾಡಿ,
ಹಿಮಮಣಿಯ, ಚಿಟ್ಟೆ, ಗಿಳಿ ಜೊತೆಯಲ್ಲಿ ಕೂಡಿ,
ಕಳೆದ ದಿನಗಳು ಪ್ರಿಯವಾಗಿತ್ತು ಎಲೆಗೆ.
ಬಿಸಿಲು, ಬಿರುಗಾಳಿ, ಧೂಳ ಸಹಿಸಿ,
ಸಿಡಿಲು, ಘೋರ್ಮಳೆಯನೆದುರಿಸಿ,
ಗೆದ್ದ ದಿನಗಳೆ ನೆಮ್ಮದಿಯು ಎಲೆಗೆ.
ತಾನು ನೋಡಿದ ಜಗವ,
ತನ್ನನುಭವದ ಲೋಕವ,
ತನ್ನ ಮರಿಯೆಲೆಗೆ ತಿಳಿಹೇಳಿತ್ತು.
ಎಲೆಯ ಕಾಲವು ಮುಗಿದು,
ಕೊನೆಯ ಪಯಣವ ತುಣಿಯುತಿರಲು,
ಮರಿಯೆಲೆಯ ಕಣ್ಗಳಲಿ
ಅಶ್ರು ತುಳುಕುರುಳಿರಲು,
ವಿಶ್ವಲೀಲೆಯಲಿ ಮೃತ್ಯುಲೀಲೆಯ
ಕಥೆಯೊಂದು ಮುಗಿದಿತ್ತು.
ಭವಲೋಕದ ಜೀವ ವ್ಯಾಪಾರಕ್ಕೆ
ಮರಿಯೆಲೆಯು ಸಾಕ್ಷಿಯಾಗಿತ್ತು.
- ಚಂದ್ರಹಾಸ ( ೧೧ - ೦೧ - ೨೦೧೨ )
ಪ್ರತಿಕ್ರಿಯೆ (2)