ಉತ್ತರ ಪ್ರದೇಶ ರಾಜ್ಯಾದ್ಯಂತ ದೊಡ್ಡ-ದೊಡ್ಡ ಆನೆ ವಿಗ್ರಗಳಿಗೆ ಮುಸುಕು ಹಾಕುವ ಬೃಹತ್ ಕಾಯðವನ್ನು ಯೋಜನೆಯನ್ನು ಚುನಾವಣಾ ಆಯೋಗ ಕೈಗೊಂಡಿದೆ. ಏಕೆಂದರೆ ಆನೆ, ರಾಜ್ಯದ ಆಡಳಿತ ಭರತೀಯ ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ. ಅಭ್ಯರ್ಥಿಗಳಿಗೆ ಪ್ರಾಣಿ-ಪಕ್ಷಿ ಚಿಹ್ನೆ ನೀಡಬಾರದೆಂಬ ನೀತಿಯನ್ನು, ಸದ್ಯ, EC ಕೈಗೊಂಡಿದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ರಾಜ್ಯದಲ್ಲಿ ಎಷ್ಟೆಲ್ಲ್ಟಾ ಪ್ರಾಣಿ-ಪಕ್ಷಿಗಳು, ನಾಮಾವಶೇಷವಾಗುವಂತೆ ವಧೆಯಾಗುತ್ತದ್ದವೊ ಏನೋ?! ಬಸ್ಸು, ಸೈಕಲ್ಲು, ಹೆಲಿಕಾಪ್ಟರುಗಳನ್ನೂ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನಡಯಾಗಿ ನೀಡಲಾಗುತ್ತದೆ. ಅಯೋಗ, ಆಯಾ ಮತಕ್ಷೇತ್ರಗಳಲ್ಲಿ ಈ ವಾಹನಗಳ ಓಡಾಟವನ್ನೂ ನಿಲ್ಲಿಸಿಬಿಡುತ್ತದೆಯೇ?
ಎಂದೋ ನಿಲ್ಲಿಸಿದ ವಿಗ್ರಹಗಳು ಅಲ್ಲಲ್ಲಿನ ಜನರಿಗೆ ಸಾಮಾನ್ಯವಾಗಿ, ಅದನ್ನವರು ಮರೆತೇಬಿಟ್ಟಿರುತ್ತಾರೆ. ಅವುಗಳಿಗೆ ಗೌಸು ಕವಿಸುವ ಮೂಲಕ ಜನತೆಯ ಗಮನ ಸೆಳೆದು ಅವರಿಗೆ ಈ ಚುನಾವಣಾ ಚಿಹ್ನೆಯನ್ನು, ಆಯೋಗವೇ ಜ್ಞಾಪಿಸಿದಂತಾಗುತ್ತದೆ!
ಆನೆ ಮುಚ್ಚುವ ಅತಿರೇಕ!
ಪ್ರತಿಕ್ರಿಯೆ (3)