ಐದುಹೊಳೆಯೂರಿನಲಿ* ಇದ್ದನವ ಮಹನೀಯ
ಹೆಸರವನದಾಗಿತ್ತು ತ್ಯಾಗರಾಜ;
ಬಗೆಬಗೆಯ ರಾಗದಲಿ ನೂರಾರು ರಚನೆಗಳ
ಮಾಡಿ ಇತ್ತಿಹನೆಮಗೆ ಯೋಗಿ ರಾಜ!
ತ್ಯಾಗರಾಜ ವಿರಾಗಿಯೇಕಾದೆ ಹೇಳು
ನೀ ನಾಗಿರಲು ರಸಿಕ ಮನವಾಳ್ವ ರಾಜ;
ಭೋಗಗಳ* ಬೇಡೆನುತ ನಿಲೆನಿಂತೆ ಹಾಡುತ್ತ
ರಾಗಗಳ ನೀ ನಿಜದಿ ರಾಗ ರಾಜ!
-ಹಂಸಾನಂದಿ
ಕೊ: ಐದುಹೊಳೆಯೂರು = ತ್ಯಾಗರಾಜರು ಬದುಕಿ ಬಾಳಿದ ತಿರುವೈಯಾರು
ಕೊ.ಕೊ: ಶರಭೋಜಿ ಮಹಾರಾಜ ತಂಜಾವೂರಿನ ಆಸ್ಥಾನವಿದ್ವಾಂಸರಾರಿರಬೇಕೆಂಬ ಆಹ್ವಾನವಿತ್ತರೂ, ತ್ಯಾಗರಾಜರು ಅದನ್ನು ಬೇಡವೆಂದೆಣಿಸಿ, ತಿರುವೈಯ್ಯಾರಿನಲ್ಲೇ ನೆಲೆ ನಿಂತರು
ಕೊ.ಕೊ.ಕೊ: ಆಸಕ್ತರು ತ್ಯಾಗರಾಜರ ಬಗ್ಗೆ ಬರೆದಿದ್ದ ___LINK_OPEN_href="http://hamsanada.blogspot.com/2008/01/blog-post_05.html"___ಸಂಗೀತರಾಜ್ಯಕ್ಕೆ ಹೀಗೊಬ್ಬ ರಾಜ ಎಂಬ ಬರಹವನ್ನಿಲ್ಲಿ ಚಿಟಕಿಸಿದರೆಓದಬಹುದು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!