ಅಬ್ಬಾ.. ಇದು ಬೆಂಗಳೂರು
 


ಬೆಳೆದೂರ ಬಿಟ್ಟರೆ ತವರೂರು

ಕಾಸಿದ್ದರೇನೆ ಇಲ್ಲಿ ಕಾರು-ಬಾರು!!

ಬದುಕರಿಯದೆ ನಿಂತರೆ ಬೆಂಕಿ ಚೂರು

ಅಬ್ಬಾ.. ಇದು ಬೆಂಗಳೂರು!!


 

 ಇಲ್ಲಿ ಕುಂತರೂ ಕಷ್ಟ ನಿಂತರು ಕಷ್ಟ 
ಮೈಮರೆತರಂತೂ ಬದುಕೇ ನಷ್ಟ    

ಕೈಲಿದ್ದರೆ ಕಾಸು ಬದುಕವರವರ ಇಷ್ಟ 

ಇರದಿದ್ದರೆ ಕಾಸು ಮರೆಯಬೇಕು ರೆಸ್ಟ.   

ಅಬ್ಬಾ.. ಇದು ಬೆಂಗಳೂರು!!
 

 ಮುಗಿಲು ಮುಟ್ಟುತಾವ ಮಹಡಿ

 ಮನಸ್ಸು ಮಾತ್ರ ಮೂರೇ ಅಡಿ

 ಕೊತುಂಡು ಕನಸೇರಲು ಜಾಗಿಲ್ಲ ಒಂದಡಿ

 ಮಂಡಿಲಂಗ ಗುಂಡಿಯಿರದ ಕುಪ್ಪಸ ಮಾನ ಕಾಲಡಿ!


ಅಬ್ಬಾ.. ಇದು ಬೆಂಗಳೂರು!!


 

 ಇಲ್ಲಿ ಕನ್ನಡವಿದೆ ಕಂಪಿಲ್ಲ

 ಸಂಗೀತವಿದೆ ಇಂಪಿಲ್ಲ

 

ಇಲ್ಲಿ ಹಗಲಲ್ಲಿ ಬಿಡುವಿಲ್ಲ 

 ರಾತ್ರಿಯಲ್ಲ್ಲಿಸುಖದ ನಿದ್ದ್ರೆಯಿಲ್ಲ

 

ಅಬ್ಬಾ.. ಇದು ಬೆಂಗಳೂರು!! 

 

ಎಲ್ಲಾ ಇದೆ ಇಲ್ಲಿ ಮೂರು ಬಿಟ್ಟು    

ಒಂದು ಸುಂದರ ಕಾಡು

ಇನ್ನೋಂದು ಸಂಸ್ಕ್ರುತಿಯ ಜಾಡು  

ಮತ್ತೊಂದು ಮಾನವತೆಯ ಹಾಡು!

ಅಬ್ಬಾ.. ಇದು ಬೆಂಗಳೂರು!!