ಮರೆತೆನೆಂದರೆ ಗೆಳತಿ

ನಾ ಮರೆಯಲಿ ಹ್ಯಾಂಗ!!?

ಬಗೆದು ತೊರಿಸಲಾ ನಿನ್ನಿರುವಿಕೆಯ..

ಆ ಮಾರುತಿಯ ಹಾಂಗ!!

 

ತುಂಬೈತೆ ನಿನ್ನದೇ ಬಿಂಬ

ನನ್ನೆದೆಯ ಮುಗಿಲ ತುಂಬಾ..

ಮರೆತನ್ನದಿರು ಮರೆತುಬಿಡೆಂದು

ನೆನಪಿದೆಯಲ್ಲಾ ಮನದ ತುಂಬಾ..

 

ಕಾಡುತಾವ ನೆನಪು ಮತ್ತೆ ಮತ್ತೆ

ಹಗಲ ನೆನಪಾಗಿ ಇರುಳ ಕನಸಾಗಿ

ಬದುಕೆ ಒಲವಾಗಿ ಒಲವ ಹೂವಾಗಿ

ಮಳೆ ನಿಂತರೂ ನಿಲ್ಲದ ಮಳೆ ಹನಿಯಂಗೆ

ತೆರೆಯಂತೆ ಮರೆಯಾಗಿ ಮತ್ತೆ ಮತ್ತೆ..

 

ಮರೆತೆನೆಂದರೆ ಗೆಳತಿ ನಾ ಮರೆಯಲಿ ಹ್ಯಾಂಗ!!?