ದೈಹಿಕ ಕನಸ್ಸಿನಿಂದೆದ್ದಾಗ ಒದ್ದೆ, ಮನಸಿಗೊಂದು ಸಣ್ಣ ತೃಪ್ತಿ, ಎಂತದ್ದೋ ವಾಸನೆ
ಮುಗಿಯದ ಯಾತನೆ, ಸುಖಕ್ಕೆ ಅದ್ಯಾವ ಅಂತ್ಯ.
 
ಮತ್ತದೇ ನಿತ್ಯದ ಮಲೆತ ಮಲಕ್ಕೆ ಅನುದಿನದ ಸ್ವಾತಂತ್ರ್ಯ
ಮೂಗು ಮುರಿಯುವುದೇಕೆ? ತಿನ್ನುವಾಗ ಅದು ಅನ್ನವೇ ಆಗಿತ್ತು.
 
ನಮ್ಮ ಒಳಗಿನ ಪಚನ ಭಜನೆಗೆ ಹೀಗಾಗಿದೆ. ನಿಸಗ್ರ ಧಮ್ರ ಅಷ್ಟೇ
ಅದಕ್ಕೆ ಯಾಕೆ ಇಷ್ಟೊಂದು ಕಷ್ಟದ ಪೋಜು
 
ಕೀವು, ರಕ್ತದ ನದಿಯಲ್ಲಿ ಜಳಕಾವಾಡುತ್ತಿದ್ದಾರೆ ಬಹುಪಾಲು ಮಂದಿ 
ನೈತಿಕ ಮುಖವಾಡ, ಕಿರೀಟಧಾರಿಗಳು.
 
ಎದೆಯಲ್ಲಿ ವೋಸ, ಕೊಳೆತು ತೊಳೆಯಲಾಗದ ದರಿದ್ರ ಗುಣಗಳಿವೆ
ಆದರೂ ತೊಳೆಯುತ್ತಿದ್ದಾರೆ ಮೈ.
 
ತಮ್ಮ ಸ್ವಾರ್ಥದ ರಕ್ತದಿಂದ ಹಲ್ಲು ಉಜ್ಜುತ್ತಿದ್ದಾರೆ, ಮತ್ತದೆ ಕೊಳಕನ್ನು 
ಕಚ್ಚಿ ಕಚ್ಚಿ ತಿನ್ನುತ್ತಿದ್ದಾರೆ.
 
ಮನಸೇ ಕಸವಾಗಿ, ದೇಹ ದೇವರ ಪಂಚಾಮೃತವಾದರೂ
ನಾಲಿಗೆಗದು ಅಮೇಧ್ಯದ ಕೊಚ್ಚೆಯೇ ತಾನೇ?