ಸ್ಫುರದ್ರೂಪಿ ಪೂತನಿಯರು ಹಾಲುಣಿಸೆ ಸಜ್ಜಾಗಿಹರು

ಸುಸಮಯಕಾಗಿ ಕಾದುನಿಂತು ಹೊಂಚು ಹಾಕಿಹರು

ಹುನ್ನಾರವನರಿಯದೆ ಹೂಟಕ್ಕೆ ಬಲಿಯಾದೊಡೆ ನಿನ್ನ

ಯಮಪುರಿಗೆ ಅಟ್ಟುವರು ನಿರ್ದಯದಿ - ನನ ಕಂದ||