ಮೇಲೇರಲೇ ಬೇಕೆಂದು ತಾ ನಿತ್ಯವು ಹಂಬಲಿಸಿ
  ಮೇಲಿರುವವರ ಕಂಡು ತಾ ನಿರಂತರ ಹಪಹಪಿಸಿ
  ಮೇಲೇರಲಾರೆನೆಂಬ ತಳಮಳದಿ ಕರುಬಿ ಕಳವಳಸಿ
  ಮೇಲಿನವರ ತನ್ನೆಡೆಗೆಳೆವುದು ಸರಿಯೆ?-ನನ ಕಂದ||