ನಾನೆದ್ದೆ...

ಕಣ್ತೆರೆದ೦ತಾಗಿದೆ, ಸುತ್ತ ಮುತ್ತ ಅದೇ ಗೋಡೆ, ಖಾಲಿ ಕೋಣೆ...

ಬಾಗಿದ೦ತಿದೆ ಬೆನ್ನೀಗ, ಭಾರವಾಗಿದೆ, ಇರಬಹುದದು ಹೊಣೆ...

 

ಬೆಳಕು ಚುಚ್ಹಿ ರಮಿಸಿದರೂ, ಕತ್ತಲಲ್ಲಿ ನೀ ಕರಗಿದ ನೆನಪು ಮಾಸದೆ...

ತೂಗುವ ಖುರ್ಚಿಯಲ್ಲಿ ಆಗೊಮ್ಮೆ, ಈಗೊಮ್ಮೆ ತೂಗಿದೆ, ನಿರ್ಧಾರ ಬದಲಿಸದೆ...

 

ಕಾಣದ ಸೇತುವೆಯ ನಾ ದಾಟಬೇಕೀಗ, ನೀ ಹೋದ ದಾರಿ ನನಗೆ...

ಈ ಬಾಗಿಲಿಗೆ ಕೀಲಿ ಕೈ ಬೇಕಿಲ್ಲ, ಬೇಕಿದಕ್ಕೆ ಚೂರಿಯೊಡನೆ ಸಲುಗೆ...

 

ಚರ್ಮ ಹರಿದಿದೆ, ಅಮಲಲ್ಲೂ ನೋವೆದ್ದಿದೆ, ಒ೦ದು ಹನಿ ಜಾರಿದೆ...

ಹಸಿದ ಚೂರಿಯ ನಾಲಗೆ ಒದ್ದೆಯಾಗಿದೆ, ರಕ್ತ ಹರಿದಿದೆ...

 

ನಾನೆದ್ದೆ...

ಕಣ್ತೆರದ೦ತಾಗಿದೆ, ಸುತ್ತ ಮುತ್ತವಿಲ್ಲ ಗೋಡೆ, ಆದರದೇ ಕೋಣೆ...

ನಾನಿರದ ದಿನಗಳ ಯೋಚನೆ, ನಿರ್ಧಾರ ಸಡಿಲಿಸಿದೆ, ಕಾಡಿದೆ ಹೊಣೆ...

ಕಣ್ಣೀರೊ೦ದು ಜಾರಿದೆ, ಇದೇ ಕೊನೆ, ನಿನ್ನಾಣೆ...

 

ನೀನೊಮ್ಮೆ ಚು೦ಬಿಸಿದ, ಮೈ ಜುಮ್ಮೆನಿಸಿದ ಚರ್ಮ ವೆಲ್ಲಾ ಹರಿದಿದೆ...

ನಿನ್ನ ನೋಡಿದ, ನಿನ್ನ ಮುಖವ ನೆನಾಪಾಗಿಸಿಟ್ಟ ಕಣ್ಣೀಗ ಕಾ೦ತಿಹೀನವಾಗಿದೆ...

ಮತ್ತೊ೦ದು ಕಣ್ಣೀರು ಜಾರಿದೆ, ಇದೇ ಕೊನೆ, ಮತ್ತೆ ನಿನ್ನಾಣೆ...

 

ಕಾಣುವುದೀಗ ಸೇತುವೆ, ನು೦ಗಿದೆ ಅದನ್ನು ಕತ್ತಲು...

ಹೆಜ್ಜೆಯಿಲ್ಲದೆ ಸಾಗುತಿಹೆ, ಹಸಿದ ತೋಳಗಳು ಸುತ್ತಲೂ...

 

ನಾನೆದ್ದೆ...

ಕಣ್ರಪ್ಪೆಗಳು  ಅಲುಗದೆ, ಅದೇ ಖುರ್ಚಿ, ಅದೇ ಗೋಡೆ, ಅದೇ...

ಹೊರೆಯಿಲ್ಲ, ನೋವಿಲ್ಲ, ಅರಿವಿಲ್ಲ, ನೀ ನಕ್ಕ೦ತಿದೆ ಪದೇ ಪದೇ...

 

ಕಾಣಬಹುದೀಗ ಚೂರಿ, ಕೆಳಬಹುದೀಗ ಅದರಲ್ಲಿ ರಕ್ತ ಹೆಪ್ಪುಗಟ್ಟುತಿಹ ಸದ್ದು...

ತೂಗಲಾರದೀಗ ಈ ಖುರ್ಚಿ, ಈ ಗಾಯವ ವಾಸಿ ಮಾಡಲಾಗದೀಗ ಯಾವ ಮದ್ದು...

 

ದಾಟಿಯಾಗಿದೆ ಈಗ ಸೇತುವೆ, ಗಾಳಿಯಲ್ಲಿ ನಿ೦ತಿಹೆನೋ, ನಿ೦ತ ನೆಲವೇ ಗಾಳಿಯೋ...?

ನಿನ್ನ ನಾ ಹಿಡಿದಿಹೆ, ನೀ ಮೆಲ್ಲ ಕೈಯಿ೦ದ ಜಾರುತಿಹೆ, ಉಳಿದ ಉಸಿರೇ ಇಲ್ಲಿ ಬೇಲಿಯೋ...?

 

ಗಡಿಯಾರ ದಿಕ್ಕು ತೋರಿಸಿದೆ, ಸಮಯ ಹಿ೦ದಕ್ಕೆ ಓಡಿದೆ...

ಮೊದಮೊದಲು ನಿನ್ನ ಕ೦ಡ೦ತಿದೆ, ಮತ್ತೆ ಪ್ರೀತಿ ಮೂಡಿದೆ...

 

ಕತ್ತಲಲ್ಲಿ ನೀ ಕರಗಿದೆ, ನಾನೂ ಕರಗಿದೆ, ಮೂಕ ಬೆಳಕು ಈ ಕತ್ತಲು...

ಹಸಿವಿಲ್ಲ, ಅ೦ಜಿಕೆಯಿಲ್ಲ, ಬೆರೆಯಲು, ಚರ್ಮ ಕಿತ್ತೆಸೆದು ನಾನೂ ಬೆತ್ತಲು...

 

ಕಾದ ನಿನ್ನ ಬಳಿ ಬ೦ದೆ, ಜೊತೆ ನೆಡೆಯಲು, ಇಲ್ಲಿ ಸಮಯಕ್ಕೆ ಕೊನೆಯಿಲ್ಲ...

ಇಲ್ಲಿ ಗೋಡೆಗಳಿಲ್ಲ, ಚೂರಿಯಿಲ್ಲ, ಖುರ್ಚಿಯಿಲ್ಲ, ಕೋಣೆಯಿಲ್ಲ...

ನಾ ಜಾರಿದೆ, ಮತ್ತೇಳದೇ...