ಹೊನ್ನ ಬಣ್ಣದ ರವಿಯ ಉದಯದೊ-
ಳೆನ್ನ ಚಿತ್ತವ ಕದಿಯ ಹೊರಟರ-
ದಿನ್ನು ವ್ಯರ್ಥವು ಹೂವೆ ನೀನಿದನರಿತರೊಳ್ಳೆಯದು!
ಜೊನ್ನ ಹುಣ್ಣಿಮೆ ಜೇನ ಮನದವ-
ಳೆನ್ನ ಮನವನು ತುಂಬಿ ಬಿಟ್ಟಿರ
ಲೆನ್ನ ನೋಟಕೆ ಬೀಳ್ವುದುಂಟೇ ಬೇರೆ ಕಮಲಗಳು?
-ಹಂಸಾನಂದಿ
ಕೊ: ಈ ವಾರ ಪದ್ಯಪಾನದಲ್ಲಿ ವರ್ಣನೆಗೆಂದು ಕೊಟ್ಟ ಚಿತ್ರ ಇದು. ಈ ಪದ್ಯ ಭಾಮಿನೀ ಷಟ್ಪದಿಯಲ್ಲಿದೆ (ಚಿತ್ರ ಕೃಪೆ:___LINK_OPEN_target="_blank" href="http://padyapaana.com/?p=962#comment-3202"___ ಪದ್ಯಪಾನ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!