ತಿರುತಿರುಗಿ ಸುತ್ತಿ ಬಸವಳಿದು ಬೆಂಡಾಗಿ ತನುದಣಿದಿರಲ್

      ಹರಿವ ಕಿರುಝರಿಯ ಬೊಗಸೆ ನೀರದುವೆ ದಣಿವಾರಿಪಂತೆ

        ಬೆಂದು ನೊಂದು ಕಿನ್ನತೆಯಿಂದ ಜರ್ಜರಿತವಾಗಿಹ ಮನವ

      ಸಂತೈಪುದು ಸಾಂತ್ವನದ ನುಡಿಯೊಂದು - ನನ ಕಂದ||