ಮುರಿದ ಮನದಲಿ ಕನಸು ಮುಗಿದಿದೆ
ಎದೆಯ ನದಿಯಲಿ ದುಗುಡ ಹರಿದಿದೆ {ಪಲ್ಲವಿ}
ದೋಣಿ ಎಲ್ಲೋ ಮುಳುಗಿದೆ
ಪಯಣ ನಿ೦ತು ನಲುಗಿದೆ {ಅನು ಪಲ್ಲವಿ}
ಯಾವ ಹಾಡನು ಹೇಗೆ ಹಾಡಲಿ
ಅವಳ ಎದೆಯನು ಹೇಗೆ ಕಾಡಲಿ
ಕಳೆದು ಹೋಗಿದೆ ಸ೦ತಸ
ಉಳಿದು ಹೋಯಿತು ಸ೦ಕಟ { 1 }
ಯಾರು ಮಾಡಿದ ಯಾವ ತಪ್ಪಿಗೆ
ಮನವು ಸುಮ್ಮನೆ ಯಾಕೆ ಒಪ್ಪಿದೆ
ಬಾನು ಕತ್ತಲು ಹಾಸಿದೆ
ಯಾವ ದಾರಿಯು ಕಾಣದೆ { 2 }
ಸುಖದ ಹಾದಿಗೆ ಬೇಲಿ ಹಾಕಿದೆ
ಪ್ರೀತಿ ಕೋಣೆಯು ಖಾಲಿ ಯಾಕಿದೆ
ಬರಡು ಭೂಮಿಯ ಹಾಗಿದೆ
ಕೊ೦ಚ ಒಲವಿಗೆ ಕಾದಿದೆ { 3 }
-ಕಾ.ವೀ.ಕೃಷ್ಣದಾಸ್ (ಯಶುಪ್ರಿಯ ಪಕ್ಷಿಕೆರೆ )
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)